Thursday, June 4, 2026
Homeಕರಾವಳಿಕಡಬ; ಜಾಗದ ವಿಚಾರದಲ್ಲಿ ಸೈನಿಕನ ಕುಟುಂಬದ ಮೇಲೆ ಹಲ್ಲೆ ; ಆಸ್ಪತ್ರೆಗೆ ದಾಖಲು

ಕಡಬ; ಜಾಗದ ವಿಚಾರದಲ್ಲಿ ಸೈನಿಕನ ಕುಟುಂಬದ ಮೇಲೆ ಹಲ್ಲೆ ; ಆಸ್ಪತ್ರೆಗೆ ದಾಖಲು

- Advertisement -
- Advertisement -

ಕಡಬ: ಜಾಗದ ವಿಚಾರದಲ್ಲಿ ಸೈನಿಕನ ಕುಟುಂಬದ ಮೇಲೆ ಹಲ್ಲೆ  ಮಾಡಿ ಗಾಯಾಳುಗಳು ಆಸ್ಪತ್ರೆಗೆ ದಾಖಲಾದ ಘಟನೆ ಕಡಬ ಠಾಣಾ ವ್ಯಾಪ್ತಿಯ ಕಲ್ಲುಗುಡ್ಡೆಯಲ್ಲಿ  ನಡೆದಿದೆ.

ಆರ್ಲ ನಿವಾಸಿ  ,ಸೈನಿಕ ಅಝೀಝ್ ಅವರ ಪತ್ನಿ ಫೌಝಿಯಾ, ಪುತ್ರ  ಕಡಬ ಸಮುದಾಯ ಆಸ್ಪತ್ರೆಗೆ ದಾಖಲಾಗಿದ್ದಾರೆ.

ನೆರೆಯ ಮನೆಯ ನಾಲ್ವರು ಜಾಗದ ವಿಚಾರದಲ್ಲಿ ಜಗಳಕ್ಕೆ ಬಂದಿದ್ದಾರೆ ಎನ್ನಲಾಗಿದೆ . ಮಾತಿಗೆ ಮಾತು ಬೆಳೆದು ಹಲ್ಲೆಯ ಹಂತಕ್ಕೆ ತಲುಪಿದೆ ಎಂದು ಎನ್ನಲಾಗುತ್ತಿದೆ.ಈ ಬಗ್ಗೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!