Sunday, June 7, 2026
Homeಕರಾವಳಿಮಂಗಳೂರು:  9 ನೇ ತರಗತಿಯ ಬಾಲಕನ ಮೇಲೆ ಇಬ್ಬರು ವಿದ್ಯಾರ್ಥಿಗಳಿಂದ ಹಲ್ಲೆ ಆರೋಪ

ಮಂಗಳೂರು:  9 ನೇ ತರಗತಿಯ ಬಾಲಕನ ಮೇಲೆ ಇಬ್ಬರು ವಿದ್ಯಾರ್ಥಿಗಳಿಂದ ಹಲ್ಲೆ ಆರೋಪ

- Advertisement -
- Advertisement -

ಮಂಗಳೂರು: 9 ನೇ ತರಗತಿಯ ಬಾಲಕನ ಮೇಲೆ ಇಬ್ಬರು ವಿದ್ಯಾರ್ಥಿಗಳು ಹಲ್ಲೆ ನಡೆಸಿದ ಆರೋಪ ಕೇಳಿ ಬಂದಿದೆ. ಮಂಗಳೂರಿನ ದ ಹೊರವಲಯದ ದೇರಳಕಟ್ಟೆ ಖಾಸಗಿ ಶಾಲೆಯ 9 ನೇ ತರಗತಿಯ ವಿದ್ಯಾರ್ಥಿ ಮೇಲಂಗಡಿಯ ಅಬ್ದುಲ್ ಮನಾಫ್‌ ಎಂಬ ಬಾಲಕನಿಗೆ ಚೊಂಬುಗುಡ್ಡೆಯ ಇಬ್ಬರು ವಿದ್ಯಾರ್ಥಿಗಳು ತೊಕ್ಕೊಟ್ಟು ಎಂಬಲ್ಲಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

ಗುರುವಾರ ಸಂಜೆ ಮನಾಫ್ ಶಾಲೆ ಬಿಟ್ಟು ಬಸ್ಸಿನಲ್ಲಿ  ಬಂದು ತೊಕ್ಕೊಟುವಿನಲ್ಲಿ  ಇಳಿದು ನಡೆದುಕೊಂಡು  ಹೋಗುತ್ತಿದ್ದಾಗ ಇಬ್ಬರು ಸೇರಿ  ಮನಾಫ್‌ಗೆ ಹಲ್ಲೆ ಮಾಡಿದ್ದು, ಇದರಿಂದ ಮನಾಫ್‌ ತಲೆ ಮತ್ತು ಕಣ್ಣಿಗೆ ಗಾಯವಾಗಿದೆ. ಗಾಯಗೊಂಡ ಬಾಲಕನನ್ನು ಖಾಸಗಿ ಆಸ್ಪತ್ರೆಗೆ  ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ. ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!