Wednesday, May 15, 2024
Homeಕರಾವಳಿಬೆಳ್ತಂಗಡಿ : ರಿಯಲ್ ಎಸ್ಟೇಟ್ ವ್ಯಕ್ತಿಯ ಮೇಲೆ ಹಲ್ಲೆ: ತೋಟದ ಮನೆಗೆ ನುಗ್ಗಿ ದಾಳಿ :...

ಬೆಳ್ತಂಗಡಿ : ರಿಯಲ್ ಎಸ್ಟೇಟ್ ವ್ಯಕ್ತಿಯ ಮೇಲೆ ಹಲ್ಲೆ: ತೋಟದ ಮನೆಗೆ ನುಗ್ಗಿ ದಾಳಿ : ಕಾರಿಗೆ ಹಾನಿ

spot_img
- Advertisement -
- Advertisement -

ಬೆಳ್ತಂಗಡಿ : ಜಾಗದ ವಿಚಾರವಾಗಿ 50 ಲಕ್ಷ ನೀಡಬೇಕಾಗಿ ರಿಯಲ್ ಎಸ್ಟೇಟ್ ಉದ್ಯಮಿಯ ತೋಟದ ಮನೆಗೆ ನುಗ್ಗಿ ಹಲ್ಲೆ ಮಾಡಿದ ಘಟನೆ ಬೆಳ್ತಂಗಡಿ ತಾಲೂಕಿನ ಉಜಿರೆಯಲ್ಲಿ ಭಾನುವಾರ ರಾತ್ರಿ‌ ನಡೆದಿದೆ.

ಉಜಿರೆ ಮೈತ್ರಿ ಹಾಸ್ಟೆಲ್ ಬಳಿಯ ರಿಯಲ್‌ ಎಸ್ಟೇಟ್‌ ಉದ್ಯಮಿ ಮ್ಯಾಥೂ(63) ಎಂಬವರ ತೋಟದ ಮನೆಯಾದ ಉಜಿರೆ ಗ್ರಾಮದ ಪೊಟ್ಟಿಕೆರೆ ಮಲಬಾರ್ ಎಸ್ಟೇಟ್ ಮಾಲೀಕನ ಮನೆಗೆ ಏರ್ಟಿಗಾ ಕಾರು ಮತ್ತು ಬೊಲೆರೋ  ಕಾರಿನಲ್ಲಿ  ಬಂದ 14  ಮಂದಿಯ ತಂಡ ಮನೆಗೆ ನುಗ್ಗಿ  ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ನಂತರ ಮ್ಯಾಥು ಅವರ ಮೊಬೈಲ್ ಕದ್ದೊಯಿದ್ದಿದ್ದಾರೆ ಮತ್ತು ಅವರ ಬೊಲೆರೋ ಕಾರಿಗೆ ಹಾನಿ ಮಾಡಿ ಪರಾರಿಯಾಗಿದ್ದು ಹಲ್ಲೆಗೊಳಗಾದ ಮ್ಯಾಥೂ ಅವರು ಬೊಬ್ಬೆ ಕೇಳಿದ ಸ್ಥಳೀಯರು ಬಂದು ಕಾರಿನಲ್ಲಿ ಉಜಿರೆ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದು ಅಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ.

ಗುರುವಾಯನಕೆರೆ ಜಾಗದ ವಿಚಾರವಾಗಿ ಹಣ ನೀಡಬೇಕಾಗಿ ಬೆದರಿಕೆ ಹಾಕಿ ವಸೂಲಿ‌ ಮಾಡಲು‌ ಮನೆಗೆ ನುಗ್ಗಿ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಬೆಳ್ತಂಗಡಿ ಪೊಲೀಸರು ತನಿಖೆ‌ ನಡೆಸುತ್ತಿದ್ದಾರೆ.

- Advertisement -
spot_img

Latest News

error: Content is protected !!