Saturday, October 17, 2026
Homeಕರಾವಳಿವಿಟ್ಲ; ;ಚರ್ಚ್ ಫಾದರ್ ಯಿಂದ ವೃದ್ಧ ದಂಪತಿ ಮೇಲೆ ಹಲ್ಲೆ ಪ್ರಕರಣ; ಧರ್ಮಗುರು ಮತ್ತು ಮತ್ತೋರ್ವ...

ವಿಟ್ಲ; ;ಚರ್ಚ್ ಫಾದರ್ ಯಿಂದ ವೃದ್ಧ ದಂಪತಿ ಮೇಲೆ ಹಲ್ಲೆ ಪ್ರಕರಣ; ಧರ್ಮಗುರು ಮತ್ತು ಮತ್ತೋರ್ವ ವ್ಯಕ್ತಿ ವಿರುದ್ಧ ಪ್ರಕರಣ ದಾಖಲು

- Advertisement -
- Advertisement -

ವಿಟ್ಲ; ;ಚರ್ಚ್ ಫಾದರ್ ಯಿಂದ ವೃದ್ಧ ದಂಪತಿ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಚರ್ಚ್ ಧರ್ಮಗುರು ಹಾಗೂ ಮತ್ತೋರ್ವ ವ್ಯಕ್ತಿ ವಿರುದ್ಧ ಪ್ರಕರಣ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮನೇಲ ಪರಿಯಾಲ್ತಡ್ಕದ ಕ್ರೈಸ್ಟ್ ಕಿಂಗ್ ಪ್ಯಾರಿಷ್ ನ ಪಾದ್ರಿ ನೆಲ್ಸನ್ ಒಲಿವೆರಾ ಹಾಗೂ ಕಾರು ಚಾಲಕ ಅಲ್ಫಾನ್ಸ್ ಮೊಂತೆರೋ ವಿರುದ್ದ ಹಲ್ಲೆ, ಮಾನಭಂಗ ಯತ್ನ ಪ್ರಕರಣ ದಾಖಲಾಗಿದೆ.

 ಏನಿದು ಪ್ರಕರಣ?

ವೃದ್ಧ ದಂಪತಿ ಮೇಲೆ ಚರ್ಚ್ ಧರ್ಮಗುರು ಹಲ್ಲೆ ನಡೆಸಿರುವ ಘಟನೆ ಬಂಟ್ವಾಳ ತಾಲೂಕಿನ ಪುಣಚ ಸಮೀಪದ ಎರ್ಮೆತ್ತಡ್ಕ ಎಂಬಲ್ಲಿ ನಡೆದಿದೆ.

ಎರ್ಮೆತಡ್ಕದ ಗ್ರೆಗರಿ ಮೊಂತೆರೋ(79) ಮತ್ತು ಪತ್ನಿ ಫಿಲೋಮಿನಾ(72) ಹಲ್ಲೆಗೊಳಗಾದ ವೃದ್ಧ ದಂಪತಿಯಾಗಿದ್ದು, ಚರ್ಚ್ ಧರ್ಮಗುರು ಫಾ. ನೆಲ್ಸನ್ ಓಲಿವೆರಾ ಕಾಲಿನಿಂದ ಒದೆದು ಹಲ್ಲೆ ನಡೆಸಿದ್ದಾರೆ.

ಮನೆ ಶುದ್ದಗೊಳಿಸುವ ನಿಮಿತ್ತ ಗ್ರೆಗರಿ ಮೊಂತೆರೋ ಮನೆಗೆ ಭೇಟಿ ನೀಡಿದ್ದ ಫಾದರ್, ಚರ್ಚ್ ಗೆ ಯಾವುದೇ ದೇಣಿಗೆ ಮತ್ತು ವಂತಿಗೆ ನೀಡದಿರುವ ಬಗ್ಗೆ ಚರ್ಚೆ ನಡೆದು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

ಹಲ್ಲೆಗೊಳಗಾದ ವೃದ್ಧ ದಂಪತಿ ಮನೆಯಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮೆರಾದಲ್ಲಿ ಹಲ್ಲೆಯ ದೃಶ್ಯ ಸೆರೆಯಾಗಿದ್ದು, ಫೆಬ್ರವರಿ 29 ರಂದು ಘಟನೆ ನಡೆದಿದೆ.ವಿಟ್ಲ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.

- Advertisement -

Latest News

error: Content is protected !!