Saturday, April 20, 2024
Homeಉದ್ಯಮಶಾಕಿಂಗ್‌ ನ್ಯೂಸ್‌: ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿ ಶೇ. 7.5ರಷ್ಟು ಕುಸಿತ

ಶಾಕಿಂಗ್‌ ನ್ಯೂಸ್‌: ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿ ಶೇ. 7.5ರಷ್ಟು ಕುಸಿತ

spot_img
- Advertisement -
- Advertisement -

ನವದೆಹಲಿ: ದೇಶದಲ್ಲಿ ಎರಡನೇ ತ್ರೈಮಾಸಿಕ ಜಿಡಿಪಿ ಅಂಕಿಅಂಶಗಳನ್ನು ಇಂದು ಬಿಡುಗಡೆ ಮಾಡಲಾಗಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಸೆಪ್ಟೆಂಬರ್ʼಗೆ ಕೊನೆಗೊಂಡ ತ್ರೈಮಾಸಿಕದಲ್ಲಿ ಭಾರತದ ಒಟ್ಟು ಆಂತರಿಕ ಉತ್ಪನ್ನ ಅಥವಾ ಜಿಡಿಪಿ ಶೇ.7.5ರಷ್ಟು ಕುಸಿತ ಕಂಡಿದೆ ಅಂಕಿಅಂಶಗಳ ಪ್ರಕಾರ, ದೇಶವು ಔಪಚಾರಿಕವಾಗಿ ಆರ್ಥಿಕ ಹಿಂಜರಿತದತ್ತ ಸಾಗುತ್ತಿದೆ.

ತಾಂತ್ರಿಕವಾಗಿ ದೇಶದ ಜಿಡಿಪಿ ದರವು ಸತತ ಎರಡು ತ್ರೈಮಾಸಿಕದಲ್ಲಿ ಋಣಾತ್ಮಕವಾಗಿದ್ದರೆ ಆರ್ಥಿಕತೆಯು ಹಿಂಜರಿತದಲ್ಲಿದೆ ಎಂದು ಹೇಳಲಾಗುತ್ತದೆ. ಮೊದಲ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿ ದರವು ಶೇ. 23.9 ರಷ್ಟು ದಾಖಲೆಯ ಕುಸಿತಕ್ಕೆ ಸಾಕ್ಷಿಯಾಗಿತ್ತು. ಕೋವಿಡ್-19 ಸಾಂಕ್ರಾಮಿಕ ರೋಗದ ಪ್ರೇರಿತ ಲಾಕ್‌ಡೌನ್ ಪರಿಣಾಮವಾಗಿ ಜಿಡಿಪಿಯು ದಶಕಗಳಲ್ಲೇ ಭಾರೀ ಇಳಿಕೆಗೆ ಕಾರಣವಾಗಿತ್ತು.

ಎರಡನೇ ತ್ರೈಮಾಸಿಕದಲ್ಲಿ ಜಿಡಿಪಿಯಲ್ಲಿ 7.5% ಕುಸಿತ ದಾಖಲಾಗಿದೆ. ಆದರೆ ಇದು ರೇಟಿಂಗ್ ಏಜೆನ್ಸಿಗಳು ಸೇರಿದಂತೆ ಆರ್‌ಬಿಐ ಅಂದಾಜುಗಳಿಗಿಂತಲೂ ಹೆಚ್ಚಾಗಿದೆ. ಈ ಪ್ರವೃತ್ತಿ ಮುಂದುವರಿದರೆ, ಪ್ರಸಕ್ತ ಹಣಕಾಸು ವರ್ಷದ ಅಂತ್ಯದ ವೇಳೆಗೆ ಜಿಡಿಪಿಯ ನಷ್ಟವನ್ನು ಗಮನಾರ್ಹವಾಗಿ ಕಡಿಮೆ ಮಾಡಬಹುದು. ದ್ವಿತೀಯ ತ್ರೈಮಾಸಿಕದಲ್ಲಿ ದೇಶದ ಜಿಡಿಪಿ ದರವನ್ನು ಶೇ. 8.6ಕ್ಕೆ ಕುಸಿಯಬಹುದು ಎಂದು ಅಂದಾಜಿಸಲಾಗಿತ್ತು. ಒಟ್ಟಾರೆಯಾಗಿ, 2020-21ರ ಆರ್ಥಿಕ ವರ್ಷದಲ್ಲಿ ಆರ್ಥಿಕತೆಯು 9.5% ರಷ್ಟು ಕುಸಿಯುವ ನಿರೀಕ್ಷೆಯಿದೆ.

ಜಾಗತಿಕ ವ್ಯಾಪಾರ ದಂಧೆಗಳ ನಡುವೆ ಗ್ರಾಹಕರ ಬೇಡಿಕೆ ಮತ್ತು ಸರ್ಕಾರದ ವೆಚ್ಚಗಳು ಮಂದಗತಿಯಲ್ಲಿದ್ದ ಕಾರಣ, ಕಳೆದ ಏಪ್ರಿಲ್ ನಿಂದ ಜೂನ್ ವರೆಗಿನ ಅವಧಿಯಲ್ಲಿ ಭಾರತದ ಅರ್ಥ ವ್ಯವಸ್ಥೆ 2013ರ ನಂತರ ಅತ್ಯಂತ ದುರ್ಬಲವಾಗಿತ್ತು.

- Advertisement -
spot_img

Latest News

error: Content is protected !!