Friday, June 5, 2026
Homeಅಪರಾಧಅಕ್ಟೋಬರ್ 7ರವರೆಗೆ ಆರ್ಯನ್ ಖಾನ್ ಎನ್ ಸಿ ಬಿ ಕಸ್ಟಡಿಗೆ!

ಅಕ್ಟೋಬರ್ 7ರವರೆಗೆ ಆರ್ಯನ್ ಖಾನ್ ಎನ್ ಸಿ ಬಿ ಕಸ್ಟಡಿಗೆ!

- Advertisement -
- Advertisement -

ಮುಂಬೈ : ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲ್ಪಟ್ಟ ಬಾಲಿವುಡ್ ನಟ ಶಾರುಖ್ ಖಾನ್ ಅವರ ಮಗ ಆರ್ಯನ್ ಖಾನ್ ಗೆ ಮುಂಬೈ ನ್ಯಾಯಾಲಯ ಜಾಮೀನು ನಿರಾಕರಿಸಿದೆ.

ಬಾಲಿವುಡ್‌ ನಟ ಶಾರುಖ್‌ ಖಾನ್‌ ಪುತ್ರ ಆರ್ಯನ್‌ʼನ್ನ ಇಂದು ಮುಂಬೈನ ಕಿಲ್ಲಾ ನ್ಯಾಯಾಲಯಕ್ಕೆ ವಿಚಾರಣೆಗಾಗಿ ಹಾಜರು ಪಡೆಸಲಾಗಿದ್ದು, ಮತ್ತೆ 3 ದಿನಗಳ ಕಾಲ ಎನ್‌ಸಿಬಿ ವಶಕ್ಕೆ ನೀಡುವಂತೆ ಆದೇಶ ನೀಡಿದೆ.

ಅರ್ಯನ್‌ ಮೊಬೈಲ್‌ನಲ್ಲಿ ದೊಡ್ಡ ಮಟ್ಟದ ಡ್ರಗ್ಸ್‌ ಖರೀದಿ ಕುರಿತು ಡ್ರಗ್ಸ್‌ ಪೆಡ್ಲರ್‌ ಜೊತೆ ಚಾಟಿಂಗ್‌ ಮಾಡಿರುವ ಮಾಹಿತಿ ಸಿಕ್ಕಿದ್ದು, ಇನ್ನು ಶಾಕಿಂಗ್‌ ಅನ್ನಿಸೋ ಪೋಟೋಗಳು ಆರ್ಯನ್‌ ಮೊಬೈಲ್‌ನಲ್ಲಿ ದೊರೆತಿವೆ ಎಂದು ಹೇಳಲಾಗಿದೆ. ಹಾಗಾಗಿ ಹೆಚ್ಚಿನ ವಿಚಾರಣೆಗಾಗಿ ಅಕ್ಟೋಬರ್‌ 11ರವರೆಗೆ ತಮ್ಮ ವಶಕ್ಕೆ ನೀಡುವಂತೆ ಎನ್‌ಸಿಬಿ ಕೋರ್ಟ್‌ ಬಳಿ ಮನವಿ ಮಾಡಿತ್ತು. ಅದರಂತೆ ಮನವಿಗೆ ಸ್ಪಂದಿಸಿದ ನ್ಯಾಯಾಲಯ ಆರ್ಯನ್‌ ಸೇರಿ 3 ಆರೋಪಿಗಳನ್ನ ಅಕ್ಟೋಬರ್‌ 7ರವರೆಗೆ ಎನ್‌ಸಿಬಿ ವಶಕ್ಕೆ ನೀಡಿದೆ.

- Advertisement -

Latest News

error: Content is protected !!