Wednesday, June 3, 2026
Homeಕರಾವಳಿಕಡಬ; ನಿಷೇಧಿತ ಮಾದಕ ವಸ್ತು ಎಂ.ಡಿ.ಎಂ.ಎ.ಯನ್ನು ಸಾಗಿಸುತ್ತಿದ್ದ ಆರೋಪಿಯ ಬಂಧನ

ಕಡಬ; ನಿಷೇಧಿತ ಮಾದಕ ವಸ್ತು ಎಂ.ಡಿ.ಎಂ.ಎ.ಯನ್ನು ಸಾಗಿಸುತ್ತಿದ್ದ ಆರೋಪಿಯ ಬಂಧನ

- Advertisement -
- Advertisement -

ಕಡಬ;ಮಾರುತಿ ಕಾರಿನಲ್ಲಿ ನಿಷೇಧಿತ ಮಾದಕ ವಸ್ತು ಎಂ.ಡಿ.ಎಂ.ಎ.ಯನ್ನು  ಸಾಗಿಸುತ್ತಿದ್ದ ಆರೋಪಿಯನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿದ್ದಾರೆ.ಕಡಬ ತಾಲೂಕಿನ ಬೆಳಂದೂರು ದೇವಸ್ಯ ನಿವಾಸಿ ಮುಹಮ್ಮದ್ ನಿಝಾರ್ (22) ಬಂಧಿತ ಆರೋಪಿ.

ಈತ ಫೆ.7ರಂದು  ಕಾರಿನಲ್ಲಿ ಎಂ.ಡಿ.ಎಂ.ಎ.ಯನ್ನು ಸಾಗಿಸುತ್ತಿದ್ದ ಸಂದರ್ಭ 34 ನೆಕ್ಕಿಲಾಡಿಯ ಬೊಳುವಾರು ಎಂಬಲ್ಲಿಉಪ್ಪಿನಂಗಡಿ ಪೊಲೀಸರು ಈತನನ್ನು ಬಂಧಿಸಿದ್ದಾರೆ. ಈ ವೇಳೆ 14.4 ಗ್ರಾಂ ಎಂ.ಡಿ.ಎಂ.ಎ ಮಾತ್ರೆಗಳನ್ನು ಸಣ್ಣ ಸಣ್ಣ ಪ್ಲಾಸ್ಟಿಕ್ನ 9 ಕವರ್‌ಗಳಲ್ಲಿ ಪ್ಯಾಕ್ ಮಾಡಿ ಕಾರಿನ ಡ್ಯಾಶ್ ಬೋರ್ಡ್‌ನಲ್ಲಿಟ್ಟು ಸಾಗಿಸುತ್ತಿದ್ದ ಎನ್ನಲಾಗಿದೆ.

ಇದರ ಮೌಲ್ಯ 35 ಸಾವಿರ ರೂ. ಎಂದು ಅಂದಾಜಿಸಲಾಗಿದೆ. ಈತನಿಂದ ಎರಡು ಮೊಬೈಲ್ ಸೆಟ್, ಮಾರುತಿ ಅಲ್ಟೋ 800 ಕಾರು ಮತ್ತು ಎರಡು ಸಾವಿರ ರೂ.ವನ್ನು ವಶಪಡಿಸಿಕೊಳ್ಳಲಾಗಿದೆ.

- Advertisement -

Latest News

error: Content is protected !!