Friday, June 5, 2026
Homeಕರಾವಳಿಪುತ್ತೂರು; ಅಡಿಕೆ ಕಳ್ಳರನ್ನು ಬಂಧಿಸಿದ ಪೊಲೀಸರು

ಪುತ್ತೂರು; ಅಡಿಕೆ ಕಳ್ಳರನ್ನು ಬಂಧಿಸಿದ ಪೊಲೀಸರು

- Advertisement -
- Advertisement -

ಪುತ್ತೂರು:  ಅಡಿಕೆ ಕಳ್ಳತನ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ಪುತ್ತೂರಿನಲ್ಲಿ ಇಬ್ಬರನ್ನು ಬಂಧಿಸಿದ್ದಾರೆ. ಪುತ್ತೂರು ತಾಲೂಕಿನ ಮಾಡ್ನೂರು ಗ್ರಾಮದ ವಿಷ್ಣು ಕಲ್ಲುರಾಯರ ಎಂಬವರ ಮನೆಯಿಂದ ಕಳೆದ ತಿಂಗಳು ಅಡಿಕೆ ಯನ್ನು ಕದ್ದ ಇಬ್ಬರನ್ನು ಪುತ್ತೂರು ಗ್ರಾಮಾಂತರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪುತ್ತೂರಿನ ನಿವಾಸಿಗಳಾದ ಕಿರಣ್ ಕುಮಾರ್ ಹಾಗೂ ಸಂತೋಷ್ ಬಂಧಿತರು. ಆರೋಪಿಗಳು ಜುಲೈ ತಿಂಗಳಲ್ಲಿ ವಿಷ್ಣುಕಲ್ಲುರಾಯ ಅವರ ಮನೆಯಿಂದ 2 ಕ್ವಿಂಟಾಲ್  ಒಣ ಅಡಿಕೆ ಹಾಗೂ ಹುಲ್ಲು ತೆಗೆಯುವ ಮೆಷಿನ್ ಕಳ್ಳತನ ಮಾಡಿದ್ದರು. ಈ ಕುರಿತಂತೆ ದೂರು ದಾಖಲಾಗಿತ್ತು, ಪ್ರಕರಣದ ತನಿಖೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದು, ಆರೋಪಿಗಳಿಂದ 1 ಕ್ವಿಂಟಾಲ್ ಅಡಿಕೆ ಮತ್ತು ಹುಲ್ಲು ತೆಗೆಯುವ ಮೇಷಿನ್ ಹಾಗೂ ಕಳ್ಳತನಕ್ಕೆ ಉಪಯೋಗಿಸಿದ ಕಾರನ್ನು ವಶ ಪಡಿಸಿಕೊಂಡಿದ್ದಾರೆ.

- Advertisement -

Latest News

error: Content is protected !!