ಬೆಂಗಳೂರು: ಕನ್ನಡದ ಪ್ರಸಿದ್ಧ ಸುದ್ದಿ ವಾಹಿನಿ ದಿಗ್ವಿಜಯ ನ್ಯೂಸ್ ಚಾನೆಲ್ ಅನ್ನು ಅರ್ನಾಬ್ ಗೋಸ್ವಾಮಿ ಒಡೆತನದ ರಿಪಬ್ಲಿಕ್ ಮೀಡಿಯಾ ನೆಟ್‌ವರ್ಕ್ ಖರೀದಿಸಿದೆ ಎನ್ನಲಾಗಿದೆ.ಈ ಬಗ್ಗೆ ವಿಶ್ವವಾಣಿಯ ಪ್ರಧಾನ ಸಂಪಾದಕ ವಿಶ್ವೇಶರ ಭಟ್ ಟ್ವೀಟ್ ಮಾಡಿದ್ದು ಅರ್ನಾಬ್ ಗೋಸ್ವಾಮಿ ಅವರನ್ನು ಕನ್ನಡ ಸುದ್ದಿಗಳ ಅಖಾಡಕ್ಕೆ ಸ್ವಾಗತಿಸಿದ್ದಾರೆ.

“ಸೈಡ್ ಪ್ಲೀಸ್. ಅರ್ನಾಬ್ ಗೋಸ್ವಾಮಿ ಬರುತ್ತಿದ್ದಾರೆ.. ರಿಪಬ್ಲಿಕ್ ಚಾನೆಲ್‌ನ ಖ್ಯಾತ ಪತ್ರಕರ್ತ ಮತ್ತು ಪ್ರಸಾರಕ ಅರ್ನಾಬ್ ಗೋಸ್ವಾಮಿ ಅವರು ಉದ್ಯಮಿ ವಿಜಯ ಸಂಕೇಶ್ವರ್ ಆರಂಭಿಸಿದ ದಿಗ್ವಿಜಯ್ ಕನ್ನಡ ವಾಹಿನಿಯನ್ನು ವಹಿಸಿಕೊಂಡಿದ್ದಾರೆ. ಇಂದಿನಿಂದ ಅರ್ನಬ್ ದಿಗ್ವಿಜಯ್ ಅವರ ಗರಡಿಯಲ್ಲಿ ಇರಲಿದ್ದಾರೆ ಎಂದು ತಿಳಿದು ಬಂದಿದೆ. ಖಂಡಿತ, ಇದು ಕರ್ನಾಟಕದ ಪ್ರಸಾರದ ಸನ್ನಿವೇಶವನ್ನು ಬದಲಾಯಿಸುತ್ತದೆ. ಅರ್ನಾಬ್ ಸ್ವಾಗತ!” ಎಂದು ವಿಶ್ವೇಶ್ವರ ಭಟ್ ಟ್ವೀಟ್ ಮಾಡಿದ್ದಾರೆ.
ಇನ್ನು ಇಂದು (ಶುಕ್ರವಾರ) ಸಂಜೆ ದಿಗ್ವಿಜಯ್ ವಾಹಿನಿಯ ಸ್ಟುಡಿಯೋದಲ್ಲಿ ರಿಪಬ್ಲಿಕ್ ಟಿವಿಯ ರಾತ್ರಿ ಕಾರ್ಯಕ್ರಮದಲ್ಲಿ ಅರ್ನಾಬ್ ಗೋಸ್ವಾಮಿ ಭಾಗವಹಿಸಲಿದ್ದಾರೆ ಎನ್ನಲಾಗಿದ್ದು, ಸದ್ಯ ಕರ್ನಾಟಕ ಮಾಧ್ಯಮ ಜಗತ್ತಿನಲ್ಲಿ ಇದು ಸಾಕಷ್ಟು ಕುತೂಹಲ ಕೆರಳಿಸಿದೆ.