Wednesday, June 24, 2026
HomeWorldಆಪರೇಷನ್‌ ಸಿಂಧೂರ 2.0ಗೆ ಸೇನೆ ಸಜ್ಜು ; ಪಾಕ್ ಮೇಲೆ ಯಾವುದೇ ಕ್ಷಣದಲ್ಲಿ 2ನೇ ದಾಳಿ...

ಆಪರೇಷನ್‌ ಸಿಂಧೂರ 2.0ಗೆ ಸೇನೆ ಸಜ್ಜು ; ಪಾಕ್ ಮೇಲೆ ಯಾವುದೇ ಕ್ಷಣದಲ್ಲಿ 2ನೇ ದಾಳಿ ಸಾಧ್ಯತೆ

- Advertisement -
- Advertisement -

ನವದೆಹಲಿ: ಆಪರೇಷನ್‌ ಸಿಂಧೂರ ಕಾರ್ಯಾಚರಣೆ ಯಶಸ್ವಿಯಾಗಿದ್ದು, ಇದೀಗ ಭಾರತವು ನೆರೆಯ ರಾಷ್ಟ್ರದ ಮೇಲೆ ಯಾವುದೇ ಕ್ಷಣದಲ್ಲಿ ಎರಡನೇ ಭಾರಿ ದಾಳಿ ನಡೆಸಲು ಸಜ್ಜಾಗಿದೆ.

ಕೇಂದ್ರ ಸರ್ಕಾರವು ಸೇನಾ ಪಡೆಗೆ ಮುಕ್ತ ಸ್ವಾತಂತ್ರ್ಯ ನೀಡಿದ್ದು, ದಾಳಿ ನಡೆಸುವ ಸಮಯ, ದಿನಾಂಕ, ಸ್ಥಳಗಳನ್ನು ನೀವೇ ಆಯ್ಕೆ ಮಾಡಿಕೊಂಡು ಮುನ್ನುಗ್ಗಿ ವೈರಿಗಳನ್ನು ಸೆದೆಬಡಿಯಿರಿ ಎಂದು ಸೂಚಿಸಿದೆ.

ರಾಷ್ಟ್ರೀಯ ಭದ್ರತಾ ಸಲಹೆಗಾರ (ಎನ್.ಎಸ್.ಎ) ಅಜಿತ್ ದೋವೆಲ್ ಅವರು ಪ್ರಧಾನಿ ಮಾತಿಗೆ ಧ್ವನಿಗೂಡಿಸಿದ್ದು, ಪಾಕಿಸ್ತಾನ ನಮ್ಮ ದೇಶದ ಮೇಲೆ ದಾಳಿ ನಡೆಸುವ ದುಸ್ಸಾಹಸ ಮಾಡಿದರೆ, ಅದಕ್ಕೆ ಭಾರೀ ಬೆಲೆ ತೆರಬೇಕಾಗುತ್ತದೆ ಎಂದು ನೇರ ಎಚ್ಚರಿಕೆ ಕೊಟ್ಟಿದ್ದಾರೆ.

- Advertisement -

Latest News

error: Content is protected !!