Thursday, June 4, 2026
Homeತಾಜಾ ಸುದ್ದಿಮಂಗಳೂರು: ಸಿಟಿ ಬಸ್‌ ಸಿಬ್ಬಂದಿ ಹಾಗೂ ಸಂಚಾರಿ ಪೊಲೀಸರ ನಡುವೆ ವಾಗ್ವಾದ: ಓರ್ವ ಚಾಲಕ ಪೊಲೀಸರ...

ಮಂಗಳೂರು: ಸಿಟಿ ಬಸ್‌ ಸಿಬ್ಬಂದಿ ಹಾಗೂ ಸಂಚಾರಿ ಪೊಲೀಸರ ನಡುವೆ ವಾಗ್ವಾದ: ಓರ್ವ ಚಾಲಕ ಪೊಲೀಸರ ವಶ

- Advertisement -
- Advertisement -

ಮಂಗಳೂರು: ಸಿಟಿ ಬಸ್ ಸಿಬ್ಬಂದಿ ಹಾಗೂ ಸಂಚಾರಿ ಪೊಲೀಸರ ನಡುವೆ ವಾಗ್ವಾದ ನಡೆದು, ಈ ವೇಳೆ ಸಂಚಾರ ರದ್ದುಗೊಳಿಸಿ ಪೊಲೀಸರ ವಿರುದ್ಧ ಪ್ರತಿಭಟನೆ ನಡೆಸಿದ ಘಟನೆ ನಗರ ಹೊರವಲಯದ ತಲಪಾಡಿಯಲ್ಲಿ ನಡೆದಿದೆ. ಒಬ್ಬ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಇಂದು ಬೆಳಗ್ಗೆ ತಲಪಾಡಿ ಚೆಕ್‌ಪೋಸ್ಟ್ ಬಳಿ ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯ ಎಎಸ್ಐ ಆಲ್ಬರ್ಟ್ ಲಸ್ರಾದೋ ನೇತೃತ್ವದಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಈ ಘಟನೆ ನಡೆದಿದೆ.  ಓವರ್ ಸ್ಪೀಡ್‌ನಲ್ಲಿ ತೆರಳುತ್ತಿದೆ ಎಂದು ಖಾಸಗಿ ಬಸ್‌ನ ಫೋಟೋ ತೆಗೆದು ದಂಡ ಹಾಕಲು ಮುಂದಾದಾಗ ಬಸ್ ಸಿಬ್ಬಂದಿ ಹಾಗೂ ಪೊಲೀಸರ ನಡುವೆ ವಾಗ್ವಾದ ನಡೆದಿದೆ.

ತಕ್ಷಣವೇ ಉಳಿದ ಸಿಟಿ ಬಸ್ ಸಿಬ್ಬಂದಿ ಸಂಚಾರ ನಿಲ್ಲಿಸಿ ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಸ್ಥಳಕ್ಕೆ ತೆರಳಿದ ಉಳ್ಳಾಲ ಪೊಲೀಸರು ಓರ್ವ ಚಾಲಕನನ್ನು ವಶಕ್ಕೆ ಪಡೆದಿದ್ದಾರೆ.

- Advertisement -

Latest News

error: Content is protected !!