Monday, March 1, 2021
Home ಕರಾವಳಿ ಸಾಮಾಜಿಕ ಜಾಲತಾಣದಲ್ಲಿ ಹಿಂದೂ ದೇವರ ಅವಹೇಳನ-ಹಿ.ಜಾ.ವೇದಿಕೆಯಿಂದ ವಿಟ್ಲ ಠಾಣೆಗೆ ದೂರು, ಆರೋಪಿಯ ಬಂಧನ

ಸಾಮಾಜಿಕ ಜಾಲತಾಣದಲ್ಲಿ ಹಿಂದೂ ದೇವರ ಅವಹೇಳನ-ಹಿ.ಜಾ.ವೇದಿಕೆಯಿಂದ ವಿಟ್ಲ ಠಾಣೆಗೆ ದೂರು, ಆರೋಪಿಯ ಬಂಧನ

- Advertisement -
- Advertisement -

ವಿಟ್ಲ: ಕಂಬಳಬೆಟ್ಟುವಿನ ವ್ಯಕ್ತಿಯೊಬ್ಬರು ಹಿಂದೂ ದೇವಿ ದೇವತೆಗಳನ್ನು ಅವಹೇಳನ ಮಾಡುವ ಸಂದೇಶವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಟ್ಟಿದ್ದರು. ಇದೀಗಾ ಈತನ ವಿರುದ್ಧ ಹಿಂದೂ ಜಾಗರಣಾ ವೇದಿಕೆ ವಿಟ್ಲ ಪೊಲೀಸರಿಗೆ ದೂರು ದಾಖಲಿಸಿದ್ದರು.

ಕುಂಬಳಬೆಟ್ಟುವಿನ ರಿಜ್ವಾನ್ ಎಂಬವರು ಹಿಂದೂ ದೇವರನ್ನು, ಹಿಂದೂ ಶಬ್ಧಗಳನ್ನು ಉಲ್ಲೇಖಿಸಿ ಅವಹೇಳನ ಮಾಡಿರುವ ಸಂದೇಶ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು , ಈ ಕುರಿತು ಹಿಂದೂಜಾಗರಣಾ ವೇದಿಕೆಯ ವಿಟ್ಲ ತಾಲೂಕು ಕಾರ್ಯದರ್ಶಿ ಹರ್ಷೇಂದ್ರ ಅವರು ವಿಟ್ಲ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದರು.

ಆರೋಪಿ ರಿಜ್ವಾನ್ ವಿರುದ್ಧ ವಿಟ್ಲ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ. ಎಫ್ ಐ ಆರ್ ದಾಖಲಾದ ಬೆನ್ನಲ್ಲೇ ವಿಟ್ಲ ಉಪನಿರೀಕ್ಷಕ ವಿನೋದ್ ರೆಡ್ಡಿ ಮತ್ತು ತಂಡ ಸಕಲೇಶಪುರದಲ್ಲಿ ಆರೋಪಿ ರಿಜ್ವಾನ್ ಖಾನ್ ನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ತಕ್ಷಣ ರಿಜ್ವಾನ್ ನನ್ನು ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು, ಇಲ್ಲದಿದ್ದರೆ ಜಿಲ್ಲೆಯಾದ್ಯಂತ ಉಗ್ರವಾದ ಪ್ರತಿಭಟನೆ ನಡೆಯಲಿದೆ ಎಂದು ಹಿಂಜಾವೇ ಪುತ್ತೂರು ಜಿಲ್ಲಾ ಸಂಪರ್ಕ ಪ್ರಮುಖ್ ನರಸಿಂಹ ಮಾಣಿ ಅವರು ಆಗ್ರಹಿಸಿದ್ದರು.

- Advertisement -
- Advertisment -

Latest News

error: Content is protected !!