ಕಾಪು: ಶ್ರೀ ಕ್ಷೇತ್ರ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ವಾರ್ಷಿಕ ಮಹೋತ್ಸವದ ಪ್ರಯುಕ್ತ ಶ್ರೀ ಮಹಾಲಕ್ಷ್ಮೀ ರಥೋತ್ಸವ ಮತ್ತು ಮಹಾಅನ್ನಸಂತರ್ಪಣೆಯು ಎ.14ರಂದು ನಡೆಯಿತು.
ದೇಗುಲದ ತಂತ್ರಿ ವೇ| ಮೂ| ಕುಕ್ಕಿಕಟ್ಟೆ ರಾಘವೇಂದ್ರ ತಂತ್ರಿ ಅವರ ನೇತೃತ್ವದಲ್ಲಿ ಪ್ರಧಾನ ಅರ್ಚಕ ವೇ| ಮೂ| ರಾಘವೇಂದ್ರ ಉಪಾಧ್ಯಾಯ ಅವರ ಪೌರೋಹಿತ್ಯದೊಂದಿಗೆ ಪ್ರಾತಃಕಾಲ ಪೂಜೆ, ನವಕ ಪ್ರಧಾನ ಹೋಮ, ಕಲಶಾಭಿಷೇಕ, ಸಹಸ್ರ ಪುಷ್ಪಾರ್ಚನೆ, ಮಹಾಪೂಜೆ, ಪಲ್ಲಪೂಜೆ, ಸಾಮೂಹಿಕ ಪ್ರಾರ್ಥನೆ, ರಥಾರೋಹಣ ಬಲಿ, ನೃತ್ಯ ದರ್ಶನ, ಮಧ್ಯಾಹ್ನ ಮಹಾಲಕ್ಷ್ಮೀ ರಥಾರೋಹಣ, ಭಜನಾ ಕಾರ್ಯಕ್ರಮ, ಭದ್ರಕಾಳಿ ಅಮ್ಮನವರ ದರ್ಶನ, ರಥಕ್ಕೆ ಅಜಕಾಯಿ ಸಮರ್ಪಣೆ, ಶ್ರೀ ಮನ್ಮಹಾರಥೋತ್ಸವ, ರಾತ್ರಿ ಸಿಡಿಮದ್ದು ಪ್ರದರ್ಶನ, ಉತ್ಸವ ಬಲಿ, ಚೆಂಡೆ ಬಲಿ, ನಾಗಸ್ವರ ಬಲಿ ಹಾಗೂ ಮಹಾಅನ್ನಸಂತರ್ಪಣೆ ನಡೆಯಿತು.
ಈ ಸಂದರ್ಭದಲ್ಲಿ ಸಾವಿರಾರು ಮಂದಿ ಅನ್ನಪ್ರಸಾದವನ್ನು ಸ್ವೀಕರಿಸಿದರು.
ವಾರ್ಷಿಕ ಮಹೋತ್ಸವದಲ್ಲಿ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ, ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ದ. ಕ. ಮೊಗವೀರ ಮಹಾಜನ ಸಂಘದ ಗೌರವ ಸಲಹೆಗಾರ ನಾಡೋಜ ಡಾ| ಜಿ. ಶಂಕರ್, ಬೆಣ್ಣೆಕುದ್ರು ಕುಲಮಹಾಸ್ರ್ತೀ ಅಮ್ಮನವರ ದೇವಸ್ಥಾನದ ಆಡಳಿತ ಮೊಕ್ತೇಸರ ಆನಂದ್ ಸಿ. ಕುಂದರ್, ದ. ಕ. ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್ ಬೆಳ್ಳಂಪಳ್ಳಿ, ಕ್ಷೇತ್ರಾಡಳಿತ ಮಂಡಳಿ ಅಧ್ಯಕ್ಷ ಗಿರಿಧರ್ ಸುವರ್ಣ, ಮಾಜಿ ಅಧ್ಯಕ್ಷ ವಾಸುದೇವ ಸಾಲ್ಯಾನ್, ಜೀರ್ಣೋದ್ಧಾರ ಸಮಿತಿ ಮಾಜಿ ಅಧ್ಯಕ್ಷ ಗುಂಡು ಬಿ. ಅಮೀನ್, ಮಹಾಜನ ಸಂಘದ ಪ್ರಧಾನ ಕಾರ್ಯದರ್ಶಿ ಶರಣ್ ಕುಮಾರ್ ಮಟ್ಟು, ಉಪಾಧ್ಯಕ್ಷ ಮೋಹನ್ ಬೇಂಗ್ರೆ, ಕೋಶಾಧಿಕಾರಿ ರತ್ನಾಕರ್ ಸಾಲ್ಯಾನ್, ಮಹಿಳಾ ಸಂಘದ ಅಧ್ಯಕ್ಷೆ ಉಷಾರಾಣಿ ಡಿ.ಕೆ., ನಾಲ್ಕು ಪಟ್ಣ ಮೊಗವೀರ ಮಹಾಸಭಾದ ಅಧ್ಯಕ್ಷ ಮನೋಜ್ ಕಾಂಚನ್, ಮಹಿಳಾ ಸಭಾದ ಉಪಾಧ್ಯಕ್ಷೆ ಶೈಲಜಾ ಪುರುಷೋತ್ತಮ್, ಕ್ಷೇತ್ರಾಡಳಿತ ಸಮಿತಿ, ದ. ಕ. ಮೊಗವೀರ ಮಹಾಜನ ಸಂಘ ಉಚ್ಚಿಲ, ಮೊಗವೀರ ಮಹಿಳಾ ಮಹಾಜನ ಸಂಘ, ಮೊಗವೀರ ಮಹಾಜನ ಸಂಘ ಮುಂಬ ಶಾಖೆಯ ಪದಾಧಿಕಾರಿಗಳು ಮತ್ತು ಸದಸ್ಯರು ಹಾಗೂ ಸಮಾಜ ಭಾಂದವರು ಪಾಲ್ಗೊಂಡಿದ್ದರು.