Wednesday, June 3, 2026
Homeಕೊಡಗುಟೋಕಿಯೋ ಒಲಿಂಪಿಕ್ಸ್: ಮಹಿಳಾ ಹಾಕಿ ತಂಡಕ್ಕೆ ಕೊಡಗಿನ ಅಂಕಿತಾ ಕೋಚ್

ಟೋಕಿಯೋ ಒಲಿಂಪಿಕ್ಸ್: ಮಹಿಳಾ ಹಾಕಿ ತಂಡಕ್ಕೆ ಕೊಡಗಿನ ಅಂಕಿತಾ ಕೋಚ್

- Advertisement -
- Advertisement -

ಮಡಿಕೇರಿ: ಕ್ರೀಡಾ ಜಿಲ್ಲೆ ಕೊಡಗು ಇದೀಗ ರಾಷ್ಟ್ರದ ಗಮನ ಸೆಳೆದಿದೆ. ಕೊಡಗಿನ ಹಾಕಿ ಕ್ರೀಡಾಪಟುವೊಬ್ಬರು ಜಪಾನಿನ ಟೋಕಿಯೋದಲ್ಲಿ ನಡೆಯಲಿರುವ ಒಲಂಪಿಕ್ಸ್ ನಲ್ಲಿ ಭಾರತದ ಸೀನಿಯರ್ ಮಹಿಳಾ ಹಾಕಿ ತಂಡದ ಕೋಚ್ ಆಗಿ ಭಾರತವನ್ನು ಪ್ರತಿನಿಧಿಸಲಿದ್ದಾರೆ. ಒಲಂಪಿಕ್ಸ್ ಸೀನಿಯರ್ ಮಹಿಳಾ ಕೋಚ್ ಆಗಿ ಕೊಡಗಿನ ಅಂಕಿತಾ ಸುರೇಶ್ ಕಾರ್ಯನಿರ್ವಹಿಸಲಿದ್ದಾರೆ. ಅಂಕಿತಾ ಸುಂಟಿಕೊಪ್ಪ ಸಮೀಪದ ಕಂಬಿಬಾಣೆಯವರು. ಈಗಾಗಲೇ ಕೋಚ್ ಅಂಕಿತಾ ಅವರನ್ನೊಳಗೊಂಡ ಭಾರತದ ಮಹಿಳಾ ಹಾಕಿ ತಂಡ ಟೋಕಿಯೋಕ್ಕೆ ಪ್ರಯಾಣ ಬೆಳೆಸಿದೆ.

ಅಂಕಿತಾ ಅವರು ಕಂಬಿಬಾಣೆಯ ಹೊನ್ನಂಪಾಡಿ ಸುರೇಶ್ ಕುಶಾಲಪ್ಪ ಅವರ ಪತ್ನಿಯಾಗಿದ್ದಾರೆ. ಜುಲೈ ೨೩ ರಿಂದ ಜಪಾನಿನ ಟೋಕಿಯೋದಲ್ಲಿ ಒಲಿಂಪಿಕ್ಸ್ ಕ್ರೀಡಾಕೂಟ ಆರಂಭವಾಗಲಿದೆ.

- Advertisement -

Latest News

error: Content is protected !!