Wednesday, June 24, 2026
Homeಕರಾವಳಿಮಂಗಳೂರುಕೊನೆಗೂ ಗುಡ್ ನ್ಯೂಸ್ ಕೊಟ್ಟ ಆಂಕರ್ ಅನುಶ್ರೀ; ಆಗಸ್ಟ್ 28ಕ್ಕೆ ಉದ್ಯಮಿ ಜೊತೆ ವಿವಾಹ

ಕೊನೆಗೂ ಗುಡ್ ನ್ಯೂಸ್ ಕೊಟ್ಟ ಆಂಕರ್ ಅನುಶ್ರೀ; ಆಗಸ್ಟ್ 28ಕ್ಕೆ ಉದ್ಯಮಿ ಜೊತೆ ವಿವಾಹ

- Advertisement -
- Advertisement -

ಬೆಂಗಳೂರು; ಆಂಕರ್ ಅನುಶ್ರೀ ಕೊನೆಗೂ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಮದುವೆ ಯಾವಾಗ ಯಾವಾಗ ಎನ್ನುತ್ತಿದ್ದವರಿಗೆ ಉತ್ತರ ಕೊಡೋದಕ್ಕೆ ಸಿದ್ಧರಾಗಿದ್ದಾರೆ.

ಆಗಸ್ಟ್ 28 ರಂದು ಅನುಶ್ರೀ ಮದುವೆ ಎಂಬ ಮಾಹಿತಿ ಸದ್ಯ ಅವರ ಆಪ್ತರಿಂದ ಹೊರ ಬಿದ್ದಿದೆ.ಮಂಗಳೂರು ಮೂಲದ ಸದ್ಯ ಬೆಂಗಳೂರಿನಲ್ಲಿ ನೆಲೆಸಿರುವ ಉದ್ಯಮಿ ರೋಷನ್ ಅವರನ್ನು ಅನುಶ್ರೀ ವಿವಾಹವಾಗಲಿದ್ದಾರೆ ಎನ್ನಲಾಗಿದೆ. ಅಂದ್ಹಾಗೆ ಇದು ಪಕ್ಕಾ ಅರೆಂಜ್ಡ್ ಮ್ಯಾರೇಜ್ ಅಂತೆ.  

ಆಗಸ್ಟ್ 28 ರಂದು ಬೆಂಗಳೂರಿನಲ್ಲೇ ಅದ್ದೂರಿ ಆರತಕ್ಷತೆಗೆ ಸ್ಥಳ ನಿಗದಿಯಾಗಿದೆ ಎನ್ನಲಾಗಿದೆ. ಈ ಬಗ್ಗೆ ಅನುಶ್ರೀ ಮಾತ್ರ ಎಲ್ಲೂ ಸಣ್ಣದೊಂದು ಸುಳಿವು ಬಿಟ್ಟುಕೊಟ್ಟಿಲ್ಲ.

- Advertisement -

Latest News

error: Content is protected !!