Monday, April 29, 2024
Homeಕರಾವಳಿಮಂಗಳೂರಿನಲ್ಲಿ ನಟ ಅನಂತ್ ನಾಗ್ ಅವರಿಗೆ ಅನಂತ ಅಭಿನಂದನೆ ಕಾರ್ಯಕ್ರಮ

ಮಂಗಳೂರಿನಲ್ಲಿ ನಟ ಅನಂತ್ ನಾಗ್ ಅವರಿಗೆ ಅನಂತ ಅಭಿನಂದನೆ ಕಾರ್ಯಕ್ರಮ

spot_img
- Advertisement -
- Advertisement -

ಮಂಗಳೂರು: ಹಿರಿಯ ಚಲನಚಿತ್ರ ನಟ ಅನಂತನಾಗ್ ಅವರಿಗೆ 75ನೇ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಅನಂತ ಅಭಿನಂದನೆ ಕಾರ್ಯಕ್ರಮ ನಡೆಯಿತು.‌ಮಂಗಳೂರು ನಗರದ ಟಿ.ವಿ. ರಮಣ ಪೈ ಸಭಾಂಗಣದಲ್ಲಿ ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನದಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಹುಟ್ಟುಹಬ್ಬ ಮತ್ತು ಅನಂತ್ ನಾಗ್ ಅವರ ಚಿತ್ರರಂಗದ ಪಯಣದ ಐವತ್ತು ವರ್ಷಗಳ ಕುರಿತಾದ ಕಾರ್ಯಕ್ರಮಕ್ಕೆ ಸಾರೋಟು ಮೆರವಣಿಗೆ ಮೂಲಕ ಅನಂತ್ ನಾಗ್ ದಂಪತಿಯನ್ನು ಕರೆತರಲಾಗಿತ್ತು.

ಮೆರವಣಿಗೆಯಲ್ಲಿ ಹುಲಿ ವೇಷ, ಚೆಂಡೆ ವಾದ್ಯದೊಂದಿಗೆ ಕಾರ್ಯಕ್ರಮದಲ್ಲಿ ಸಂವಾದ, ಅನಂತ್ ನಾಗ್ ಅವರ ಆಯ್ದ ಹಾಡುಗಳು, ನ್ಯತ್ಯ ಹೀಗೆ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.ಕಾರ್ಯಕ್ರಮದಲ್ಲಿ ಅನಂತ್ ನಾಗ್ ಅವರ ಪತ್ನಿ ಗಾಯತ್ರಿ ನಾಗ್ ಮತ್ತು ಪುತ್ರಿ ಅದಿತಿ ನಾಗ್ ಭಾಗಿಯಾಗಿದ್ದರು.

- Advertisement -
spot_img

Latest News

error: Content is protected !!