Friday, June 21, 2024
Homeಕರಾವಳಿಮರ ಕಡಿಯುವ ವೇಳೆ ಆಕಸ್ಮಿಕವಾಗಿ ಬಿದ್ದು ಗಂಭೀರವಾಗಿ ಗಾಯಗೊಂಡ ಆಟೋ ಚಾಲಕ; ಚಿಕಿತ್ಸೆಗಾಗಿ ನೆರವು ಕೋರಿದ...

ಮರ ಕಡಿಯುವ ವೇಳೆ ಆಕಸ್ಮಿಕವಾಗಿ ಬಿದ್ದು ಗಂಭೀರವಾಗಿ ಗಾಯಗೊಂಡ ಆಟೋ ಚಾಲಕ; ಚಿಕಿತ್ಸೆಗಾಗಿ ನೆರವು ಕೋರಿದ ಕುಟುಂಬ

spot_img
- Advertisement -
- Advertisement -

ಬೆಳಾಲು: ಮರ ಕಡಿಯುವ ವೇಳೆ ಆಕಸ್ಮಿಕವಾಗಿ ಬಿದ್ದು ವ್ಯಕ್ತಿಯೋರ್ವ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ. ಇದೀಗ ಗಾಯಗೊಂಡ ವ್ಯಕ್ತಿಯು ದಾನಿಗಳಲ್ಲಿ ಸಹಾಯ ಹಸ್ತವನ್ನು ಕೋರಿದ್ದಾರೆ.

ಮಾಯ ಪುಚ್ಚೆಹಿತ್ಲು ನಿವಾಸಿ ವೃತ್ತಿಪರ ಆಟೋ ಚಾಲಕ ವಿಶ್ವನಾಥ್ ಗೌಡ ಪುಚ್ಚೆಹಿತ್ತಿಲು ಮರ ಕಡಿಯುವ ವೇಳೆ ಆಕಸ್ಮಿಕವಾಗಿ ಬಿದ್ದು ಗಂಭೀರವಾಗಿ ಗಾಯಗೊಂಡು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 

ದಿನಗೂಲಿ ಕಾರ್ಮಿಕನಾಗಿ ದುಡಿಯುತ್ತಾ ಕುಟುಂಬಕ್ಕೆ ಆಸರೆಯಾಗಿದ್ದ ಇವರ ಚಿಕಿತ್ಸಾ ವೆಚ್ಚ 5 ಲಕ್ಷ ರೂಪಾಯಿಯಷ್ಟಾಗಿದೆ. ದುಬಾರಿ ವೆಚ್ಚವನ್ನು ಕುಟುಂಬಕ್ಕೆ ಭರಿಸಲು ತುಂಬಾ ಕಷ್ಟಕರವಾದ ಈ ಸಂದರ್ಭದಲ್ಲಿ ದಾನಿಗಳು ಕೈ ಜೋಡಿಸುವಂತೆ ವಿನಂತಿಸಿದ್ದಾರೆ.

ಬ್ಯಾಂಕ್ ಖಾತೆಯ ವಿವರಗಳು: Name: Vishwanatha, IFSC code :CNRB0005156, Account No:02532250003103, Google pay No: 9483367709

- Advertisement -
spot_img

Latest News

error: Content is protected !!