Monday, June 8, 2026
Homeಕರಾವಳಿಕಡಬ: ಪೊಲೀಸ್ ಜೀಪ್ ಮತ್ತು ಬೊಲೆರೋ ವಾಹನ ನಡುವೆ ಅಪಘಾತ : ಅಪಾಯದಿಂದ ಪಾರು!

ಕಡಬ: ಪೊಲೀಸ್ ಜೀಪ್ ಮತ್ತು ಬೊಲೆರೋ ವಾಹನ ನಡುವೆ ಅಪಘಾತ : ಅಪಾಯದಿಂದ ಪಾರು!

- Advertisement -
- Advertisement -

ಕಡಬ: ಕಡಬ ಎಸ್.ಐ. ರುಕ್ಕ ನಾಯ್ ಪ್ರಯಾಣಿಸುತ್ತಿದ್ದ ಜೀಪು ಹಾಗೂ ಬೊಲೆರೋ ಮಧ್ಯೆ ಡಿಕ್ಕಿ ಸಂಭವಿಸಿದ್ದು ಎರಡು ವಾಹನಗಳು ನುಜ್ಜುಗುಜ್ಜಾದ ಘಟನೆ ಸೆ.4ರಂದು ಬೆಳಿಗ್ಗೆ ಕಡಬ ಸಮೀಪದ ಕಳಾರ ಎಂಬಲ್ಲಿ ನಡೆದಿದೆ.

ಕಡಬ ಎಸ್ಐ ತನ್ನ ಸಿಬ್ಬಂದಿಗಳೊಂದಿಗೆ ಇಲಾಖಾ ವಾಹನದಲ್ಲಿ ಉಪ್ಪಿನಂಗಡಿ ಕಡೆಗೆ ತೆರಳುತ್ತಿದ್ದ ವೇಳೆ ಕಳಾರ ಸಮೀಪ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಬೊಲೆರೋ ನಡುವೆ ಮುಖಾ ಮುಖಿ ಡಿಕ್ಕಿಯಾಗಿದೆ. ಘಟನೆಯಲ್ಲಿ ಎರಡು ವಾಹನಗಳು ನಜ್ಜುಗುಜ್ಜಾಗಿದ್ದು, ಪೊಲೀಸ್ ಜೀಪು ಹಾಗೂ ಬೊಲೇರೋ ಕಾರಿನ ಚಾಲಕರಿಬ್ಬರು ಅಪಾಯದಿಂದ ಪಾರಾಗಿದ್ದಾರೆ. ಸದ್ಯ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ

- Advertisement -

Latest News

error: Content is protected !!