Thursday, June 4, 2026
Homeತಾಜಾ ಸುದ್ದಿಕನ್ನಡದ ನಟಿ ಮತ್ತು ಹಾಲಿ ಸಂಸದೆ ನವನೀತ್ ಕೌರ್ ರಾಣಾಗೆ ಕೊರೋನಾ ಪಾಸಿಟಿವ್ !

ಕನ್ನಡದ ನಟಿ ಮತ್ತು ಹಾಲಿ ಸಂಸದೆ ನವನೀತ್ ಕೌರ್ ರಾಣಾಗೆ ಕೊರೋನಾ ಪಾಸಿಟಿವ್ !

- Advertisement -
- Advertisement -

ಮುಂಬೈ: ಕೊರೊನಾ ಮಹಾಮಾರಿ ಸೋಂಕಿಗೆ ತುತ್ತಾಗುತ್ತಿರುವ ಪ್ರಮುಖರ ಪಟ್ಟಿ ಹೆಚ್ಚಾಗುತ್ತಿದ್ದು, ನಟಿ ಹಾಗು ಅಮರಾವತಿ ಸಂಸದೆ ನವನೀತ್ ಕೌರ್ ರಾಣಾರಿಗೆ ಕೊರೊನಾ ಸೋಂಕು ಇರುವುದು ದೃಢವಾಗಿದೆ. ಆ.6 ರಂದು ನಡೆಸಿದ ಕೊರೊನಾ ಪರೀಕ್ಷೆಯಲ್ಲಿ ಕೊರೊನಾ ಸೋಂಕು ಇರುವುದು ದೃಢವಾಗಿದೆ ಎಂದು ನಟಿ ನವನೀತ್ ಕೌರ್ ತಿಳಿಸಿದ್ದಾರೆ. ಸದ್ಯ ನಟಿ ಮಹಾರಾಷ್ಟ್ರದ ನಾಗಪುರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

2019ರ ಸಾರ್ವತ್ರಿಕ ಚುನಾವಣೆಯಲ್ಲಿ ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಹಾಗೂ ನಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ)ಯ ಜಂಟಿ ಅಭ್ಯರ್ಥಿಯಾಗಿ ಅಮರಾವತಿಯಲ್ಲಿ ಸ್ಪರ್ಧೆ ಮಾಡಿದ್ದ ನವನೀತ್ ಕೌರ್ ಗೆಲುವು ಪಡೆದು ಸಂಸದರಾಗಿ ಆಯ್ಕೆಯಾಗಿದ್ದಾರೆ. ಲೋಕಸಭೆಗೆ ಆಯ್ಕೆಯಾದ ಬಳಿಕ ಸಂಸತ್ನೆಲ್ಲಿ ಹಲವು ವಿಚಾರಗಳ ಕುರಿತು ಧ್ವನಿ ಎತ್ತಿದ್ದರು.

ಕನ್ನಡ, ತೆಲುಗು, ತಮಿಳು, ಮಲಯಾಳಂ ಸೇರಿದಂತೆ ಹಿಂದಿ ಭಾಷೆಗಳ ಚಿತ್ರಗಳಲ್ಲಿ ನಟಿಸಿರುವ ನವನೀತ್ ಕೌರ್, ಚಾಲೆಂಜಿಂಗ್ ಸ್ಟಾರ್ ನಟನೆಯ ‘ದರ್ಶನ್‌’ ಸಿನಿಮಾದಲ್ಲಿ ಕೂಡ ಅಭಿನಯಿಸಿದ್ದಾರೆ.

- Advertisement -

Latest News

error: Content is protected !!