Monday, June 8, 2026
Homeಕ್ರೀಡೆಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಭಾರತಕ್ಕೆ ಮತ್ತೊಂದು ಪದಕ; 57 ಕೆಜಿ ಫ್ರೀಸ್ಟೈಲ್ ಕುಸ್ತಿಯಲ್ಲಿ ಅಮನ್ ಸೆಹ್ರಾವತ್...

ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಭಾರತಕ್ಕೆ ಮತ್ತೊಂದು ಪದಕ; 57 ಕೆಜಿ ಫ್ರೀಸ್ಟೈಲ್ ಕುಸ್ತಿಯಲ್ಲಿ ಅಮನ್ ಸೆಹ್ರಾವತ್ ಗೆ ಕಂಚಿನ ಪದಕ

- Advertisement -
- Advertisement -

ಪ್ಯಾರಿಸ್ : ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಭಾರತಕ್ಕೆ ಮತ್ತೊಂದು ಪದಕ ಲಭ್ಯವಾಗಿದೆ. 57 ಕೆಜಿ ಫ್ರೀಸ್ಟೈಲ್ ಕುಸ್ತಿಯಲ್ಲಿ ಅಮನ್ ಸೆಹ್ರಾವತ್ ಗೆ ಕಂಚಿನ ಪದಕ ಲಭಿಸಿದೆ. ಈ ಮೂಲಕ ಭಾರತದ ಪದಕಗಳ ಪಟ್ಟಿ 6 ಕ್ಕೆ ಏರಿಕೆಯಾಗಿದೆ.

ಪೋರ್ಟೊ ರಿಕೊದ ಡೇರಿಯನ್ ಟಾಯ್ ಕ್ರೂಜ್ ಅವರನ್ನು 13-5 ರಿಂದ ಸೋಲಿಸಿದ ಅಮನ್ ಸೆಹ್ರಾವತ್ ಭಾರತಕ್ಕೆ 6ನೇ ಪದಕ ತಂದಿದ್ದಾರೆ.ಇನ್ನು ಮನ್ ಸೆಹ್ರಾವತ್ ಈ ವರ್ಷ ಭಾರತದ ಪರ ಸ್ಪರ್ಧಿಸಿದ ಏಕೈಕ ಪುರುಷ ಕುಸ್ತಿಪಟುಒಲಿಂಪಿಕ್ ಕ್ರೀಡಾಕೂಟದಲ್ಲಿ ತನ್ನ ಮೊದಲ ಪ್ರದರ್ಶನದಲ್ಲಿ ಇತಿಹಾಸವನ್ನು ಸೃಷ್ಟಿಸಿದ್ದಾರೆ.

57 ಕೆಜಿ ಕುಸ್ತಿ ವಿಭಾಗದಲ್ಲಿ ಆಮನ್ ಮೂರನೇ ಸ್ಥಾನದೊಂದಿಗೆ ಕಂಚಿನ ಪದಕ ಪಡೆದಿದ್ದಾರೆ. ಒಲಿಂಪಿಕ್ಸ್ ನಲ್ಲಿ ಪದಕ ಗೆದ್ದ ಭಾರತದ 7ನೇ ಕುಸ್ತಿಪಟುವಾಗಿದ್ದಾರೆ.

- Advertisement -

Latest News

error: Content is protected !!