Wednesday, June 24, 2026
Homeಅಪರಾಧನಿಷೇಧಿತ ಮಾದಕ ಸೇವನೆ ಮಾಡಿದ ಆರೋಪ; ಐದು ಮಂದಿಯ ಬಂಧನ

ನಿಷೇಧಿತ ಮಾದಕ ಸೇವನೆ ಮಾಡಿದ ಆರೋಪ; ಐದು ಮಂದಿಯ ಬಂಧನ

- Advertisement -
- Advertisement -

ಮಂಗಳೂರು: ನಿಷೇಧಿತ ಮಾದಕ ವಸ್ತುವನ್ನು ಸೇವನೆ ಮಾಡಿದ ಆರೋಪದಲ್ಲಿ ಐದು ಮಂದಿಯನ್ನು ಪೊಲೀಸರು ನಗರದ ವಿವಿಧ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಬಂಧಿಸಿದ್ದಾರೆ.

ಬಂಧಿತರು ಬಂದರು ನಿವಾಸಿ ಅಮೀರ್‌ ಸುಹೇಲ್‌ (28), ಸೈಮನ್‌ಲೇನ್‌ ಕ್ರಾಸ್‌ ಬಳಿ ರಾಹುಲ್‌, ಸುಲ್ತಾನ್‌ ಬತ್ತೇರಿ ಬಳಿ ಕೇರಳ ಕೊಲ್ಲಂ ನಿವಾಸಿ ಅನ್ಫಸ್‌ ಮೊಹಮ್ಮದ್‌ (21), ವಾಮಂಜೂರಿನ ಕಾಲೇಜೊಂದರ ಬಳಿ ಬಜಪೆಯ ಮೊಹಮ್ಮದ್‌ ರಾಜಿ (22) ಮತ್ತು ದಂಬೆಲ್‌ ನದಿ ತೀರದಲ್ಲಿ ಕಣ್ಣೂರು ನಿವಾಸಿ ಅಭಿನವ್‌ ಕೆ.ಪಿ. (19) ಎಂದು ಹೇಳಲಾಗಿದೆ.

ಇವರನ್ನು ಕಂಡತ್‌ಪಳ್ಳಿ ಸಾರ್ವಜನಿಕ ಸ್ಥಳದಲ್ಲಿ ಮಾದಕ ಸೇವನೆ ಮಾಡಿದ ಆರೋಪದಲ್ಲಿ ಬಂಧಿಸಲಾಗಿದ್ದು, ವೈದ್ಯಕೀಯ ತಪಾಸಣೆ ನಡೆಸಿದಾಗ ಮಾದಕ ಸೇವನೆ ಮಾಡಿರುವುದು ದೃಢಪಟ್ಟಿದೆ.

- Advertisement -

Latest News

error: Content is protected !!