Tuesday, May 21, 2024
Homeಅಪರಾಧಬೆಳ್ತಂಗಡಿ : ತೋಡಿಗೆ ಮೀನು ಹಿಡಿಯಲು ವಿದ್ಯುತ್ ಸಂಪರ್ಕ ನೀಡಿದ ಪ್ರಕರಣ: ಅಳದಂಗಡಿಯ ಆರೋಪಿ ಸವೇರಾ...

ಬೆಳ್ತಂಗಡಿ : ತೋಡಿಗೆ ಮೀನು ಹಿಡಿಯಲು ವಿದ್ಯುತ್ ಸಂಪರ್ಕ ನೀಡಿದ ಪ್ರಕರಣ: ಅಳದಂಗಡಿಯ ಆರೋಪಿ ಸವೇರಾ ಪಿರೇರಾ ಬಂಧನ.

spot_img
- Advertisement -
- Advertisement -

ಬೆಳ್ತಂಗಡಿ : ವಿದ್ಯುತ್ ಪ್ರವಹಿಸಿ ಮೀನು ಹಿಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ವ್ಯಕ್ತಿಯನ್ನು ಬಂಧಿಸಿರುವ ಘಟನೆ ಅಳದಂಗಡಿಯಲ್ಲಿ ನಡೆದಿದೆ.

ದಿನಾಂಕ 13-06-2021 ರಂದು ರಾತ್ರಿ 8.30 ಗಂಟೆ ಸಮಯಕ್ಕೆ ಜಾನ್ ಡಿಸೋಜಾ ಎಂಬವರು ಬಡಗಕಾರಂದೂರು ಗ್ರಾಮದ ಅಳದಂಗಡಿ ಎಂಬಲ್ಲಿರುವ ನಮನ ಡಾಬಾದ ಸಮೀಪದಲ್ಲಿರುವ ನೀರಿನ ಹಳ್ಳಕ್ಕೆ ಮೀನು ಹಿಡಿಯಲು ಹೋದಾಗ ಅವರಿಗೆ ಕರೆಂಟ್‌ ಪ್ರವಹಿಸುವ ಅನುಭವ ಅಗಿದ್ದು ಆತಂಕಗೊಂಡು ಮರುದಿನ ಜಾನ್ ಡಿಸೋಜಾ ಮತ್ತು ಅಳದಂಗಡಿ ಮೆಸ್ಕಾಂ ಇಂಜಿನಿಯರ್ , ಲೈನ್‌ ಮ್ಯಾನ್ ,ಕಾರ್ಯಪಾಲಕ ಇಂಜಿನಿಯರ್ ಶಿವಶಂಕರ್ ಅವರ ಗಮನಕ್ಕೆ ತಂದಿದ್ದಾರೆ.

ಅದರಂತೆ ಅವರೆಲ್ಲಾ ಹಳ್ಳದ  ಬಳಿ ತೆರಳಿ ಪರಿಶಿಲಿಸಿದಾಗ ಸವೇರಾ ಪಿರೇರಾ(45) ಎಂಬ ವ್ಯಕ್ತಿ ಪಂಪು ಶೆಡ್ಡಿನಿಂದ ಅನದಿಕೃತವಾಗಿ ವಿದ್ಯುತ್‌ ಹರಿಸಿರುವುದು ಕಂಡು ಬಂದಿದೆ.  ಪರಿಶೀಲಿಸಿದಾಗ ಆರೋಪಿ  ಸವೇರಾ ಪಿರೇರಾ ಪಂಪ್‌ ಶೆಡ್‌ ನಿಂದ  ಕೇಬಲ್‌ ವಯರ್‌ ಮುಖಾಂತರ ಅನಧಿಕೃತವಾಗಿ ಶೆಡ್ಡಿನ ಪಕ್ಕದಲ್ಲಿರುವ ನೀರು ಹರಿಯುವ ಹಳ್ಳಕ್ಕೆ ಅಡ್ಡಲಾಗಿ ಎರಡು ತಂತಿಯನ್ನು ಕಟ್ಟಿ ಅಪಾಯಕಾರಿಯಾಗುವಂತೆ ಕಾನೂನು ಬಾಹಿರವಾಗಿ ವಿದ್ಯುತ್‌ ಹಾಯಿಸಿ ಜನರ ಹಾಗೂ ಇತರ ಪ್ರಾಣಿಗಳ ಜೀವಕ್ಕೆ ಹಾನಿಯಾಗುವಂತೆ ಅಪರಾಧ ಎಸಗಿದ್ದಾರೆ ಗೊತ್ತಾಗಿದೆ. ಕೂಡಲೇ  ಮೆಸ್ಕಾಂ ಅಧಿಕಾರಿಗಳು ಫೋಟೋ ಹಾಗೂ ವಿಡಿಯೋ ಸಮೇತ ವೇಣೂರು ಠಾಣೆಗೆ ದೂರು ನೀಡಿದ್ದಾರೆ.

ಅದರಂತೆ ಆರೋಪಿಯ ಬಂಧನಕ್ಕೆ ತೆರಳಿದ್ದ ವೇಳೆ ಆತ ಪರಾರಿಯಾಗಿದ್ದ.  ಈತನ ಮೇಲೆ ಹಲವು ಕ್ರಿಮಿನಲ್ ಕೇಸುಗಳಿದ್ದು. ಮೂರು ವರ್ಷದ ಹಿಂದೆ ತನ್ನ ವೃದ್ಧ ತಂದೆ ತಾಯಿಗೆ ಹಲ್ಲೆ ಮಾಡಿದ್ದ ಆರೋಪ ಎದುರಿಸುತ್ತಿದ್ದ. ಇಂದು ವೇಣೂರು ಪೊಲೀಸರು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

- Advertisement -
spot_img

Latest News

error: Content is protected !!