Saturday, June 6, 2026
Homeಪ್ರಮುಖ-ಸುದ್ದಿಕೇರಳದ ಕ್ಯಾಲಿಕಟ್ ನಲ್ಲಿ ವಿಮಾನ ಅವಘಡ - ಏರ್ ಇಂಡಿಯಾ ಪೈಲೆಟ್ ಸಾವು, ಸಾವಿನ ಸಂಖ್ಯೆ...

ಕೇರಳದ ಕ್ಯಾಲಿಕಟ್ ನಲ್ಲಿ ವಿಮಾನ ಅವಘಡ – ಏರ್ ಇಂಡಿಯಾ ಪೈಲೆಟ್ ಸಾವು, ಸಾವಿನ ಸಂಖ್ಯೆ ಏರಿಕೆಯಾಗುವ ಸಾಧ್ಯತೆ

- Advertisement -
- Advertisement -

ಕೇರಳ : ಕೇರಳ ಕೋಯಿಕ್ಕೋಡ್ ನ ಕರಿಪುರ ವಿಮಾನ ನಿಲ್ದಾಣದಲ್ಲಿ ಭಾರೀ ಅನಾಹುತ ನಡೆದಿದೆ. ಲ್ಯಾಡಿಂಗ್ ಮೇಲೆ ಏರ್ ಇಂಡಿಯಾ ವಿಮಾನ ಪತನವಾಗಿದೆ. ಪರಿಣಾಮ ಏರ್ ಇಂಡಿಯಾದ ಪೈಲೆಟ್ ಸಾವನ್ನಪ್ಪಿದ್ದಾರೆ. ಒಟ್ಟು 174 ಮಂದಿ ಪ್ರಯಾಣಿಕರು ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು. 6 ಮಂದಿ ಏರ್ ಇಂಡಿಯಾ ಸಿಬ್ಬಂದಿಯಿದ್ದರು. ಇದರಲ್ಲಿ 10 ಹಸುಗೂಸುಗಳು ಕೂಡ ಸೇರಿವೆ.

ದುಬೈನಿಂದ ಈ ವಿಮಾನ ವಂದೇ ಭಾರತ ಮಿಷನ್ ಯೋಜನೆಯಡಿ ಕೇರಳಕ್ಕೆ ಪ್ರಯಾಣಿಕರನ್ನು ಹೊತ್ತು ತಂದಿತ್ತು. ಇನ್ನು ಘಟನೆಯಲ್ಲಿ ಇನ್ನಷ್ಟು ಸಾವು ನೋವು ಸಂಭವಿಸಿರುವ ಶಂಕೆ ವ್ಯಕ್ತವಾಗಿದ್ದು, ಭರದಿಂದ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಈಗಾಗಲೇ 18 ಪ್ರಯಾಣಿಕರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲದೇ ಏರ್ ಪೋರ್ಟ್ ಗೆ 15 ಆ್ಯಂಬುಲೆನ್ಸ್ ಗಳ ಆಗಮನವಾಗಿದ್ದು, ಭರದಿಂದ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.

- Advertisement -

Latest News

error: Content is protected !!