Wednesday, June 3, 2026
Homeತಾಜಾ ಸುದ್ದಿಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ ನಟಿ ಪ್ರಣೀತಾ ಸುಭಾಷ್

ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ ನಟಿ ಪ್ರಣೀತಾ ಸುಭಾಷ್

- Advertisement -
- Advertisement -

ಬೆಂಗಳೂರು; ಸ್ಯಾಂಡಲ್ ವುಡ್ ನ ಅನೇಕ ನಟಿ ಮಣಿಯರು ಸಾಲು ಸಾಲು ಗುಡ್  ನ್ಯೂಸ್ ಗಳನ್ನು ಕೊಡುತ್ತಿದ್ದಾರೆ. ಈಗಾಗಲೇ ನಟಿ ಮಿಲನ ನಾಗರಾಜ್, ಕವಿತಾ ಗೌಡ, ನೇಹಾ ಗೌಡ, ಹರ್ಷಿಕಾ ಪೂಣಚ್ಚ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.ಹೀಗಿರುವಾಗಲೇ ಕನ್ನಡದ ಮತ್ತೊರ್ವ ಖ್ಯಾತ ನಟಿ ಗುಡ್ ನ್ಯೂಸ್ ಕೊಟ್ಟಿದ್ದಾರೆ.

ನಟಿ ಪ್ರಣೀತಾ ಸುಭಾಷ್ ಅವರು ತಾವು ಎರಡನೇ ಮಗುವಿನ ನಿರೀಕ್ಷೆಯಲ್ಲಿರೋದಾಗಿ ಹೇಳಿದ್ದಾರೆ. ಪ್ರಣಿತಾ ಜೂನ್ 2022ರಲ್ಲಿ ತಮ್ಮ ಮೊದಲ ಮಗುವಿಗೆ ಜನ್ಮ ನೀಡಿದ್ದರು. ಈ ಹೆಣ್ಣು ಮಗುವಿಗೆ ಅವರು ಅರ್ನಾ ಎಂದು ಹೆಸರಿಟ್ಟಿದ್ದಾರೆ. ಇದೀಗ ಅವರು ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ಬಗ್ಗೆ ಇನ್ಸ್ಟಾಗ್ರಾಂನಲ್ಲಿ ಅವರು ಖುಶಿ ಹಂಚಿಕೊಂಡಿದ್ದಾರೆ. ಇದಕ್ಕೆ ಕ್ರಿಯೇಟಿವ್ ಆಗಿರುವ ಟ್ಯಾಗ್ ಲೈನ್ ಕೊಟ್ಟಿದ್ದಾರೆ. ರೌಂಡ್ 2 ಪ್ಯಾಂಟ್ ಇನ್ನು ಮುಂದೆ ಫಿಟ್ ಆಗಲ್ಲ ಎಂದಿದ್ದಾರೆ. ಪ್ರಣೀತಾ ಪೋಸ್ಟ್ ಗೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.

2021ರ ಮೇ ತಿಂಗಳಲ್ಲಿ ಉದ್ಯಮಿ ನಿತಿನ್  ರಾಜು ಅವರ ಜೊತೆ ಪ್ರಣಿತಾ ಹಸೆಮಣೆ ಏರಿದ್ದರು. ಕೊವಿಡ್ ಮುಂಜಾಗ್ರತೆ ಕ್ರಮವಾಗಿ ಕೇವಲ ಆಪ್ತರ ಸಮ್ಮುಖದಲ್ಲಿ ಅವರ ಮದುವೆ ಸಮಾರಂಭ ನಡೆದಿತ್ತು.  

- Advertisement -

Latest News

error: Content is protected !!