Tuesday, June 18, 2024
Homeತಾಜಾ ಸುದ್ದಿ ರೇಣುಕಾಸ್ವಾಮಿ ಕೊಲೆ ಪ್ರಕರಣ: ಇನ್ನೂ 5 ದಿನಗಳ ಕಾಲ ಡಿ ಗ್ಯಾಂಗ್ ಪೊಲೀಸ್ ಕಸ್ಟಡಿಗೆ

 ರೇಣುಕಾಸ್ವಾಮಿ ಕೊಲೆ ಪ್ರಕರಣ: ಇನ್ನೂ 5 ದಿನಗಳ ಕಾಲ ಡಿ ಗ್ಯಾಂಗ್ ಪೊಲೀಸ್ ಕಸ್ಟಡಿಗೆ

spot_img
- Advertisement -
- Advertisement -

ಬೆಂಗಳೂರು; ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇವತ್ತು ದರ್ಶನ್ ಸೇರಿದಂತೆ 19 ಆರೋಪಿಗಳ ಪೊಲೀಸ್ ಕಸ್ಟಡಿ ಅವಧಿ ಇಂದಿಗೆ ಮುಕ್ತಾಯವಾದ ಹಿನ್ನೆಲೆ ಆರೋಪಿಗಳನ್ನು ಆರ್ಥಿಕ ಅಪರಾಧಗಳ ವಿಶೇಷ ಕೋರ್ಟ್ ಮುಂದೆ ಹಾಜರುಪಡಿಸಲಾಯಿತು. ಈ ವೇಳೆ ರಾಜ್ಯ ಸರ್ಕಾರದ ಪರವಾದ ವಕೀಲ ಪ್ರಸನ್ನಕುಮಾರ್ ಆರೋಪಿಗಳು ಮತ್ತೆ 9 ದಿನಗಳ ಕಾಲ ಕಸ್ಟಡಿಗೆ ನೀಡುವಂತೆ ಮನವಿ ಮಾಡಿದ್ರು. ಅಲ್ಲದೇ ಇನ್ನೂ ಕೂಡ ಕೆಲವು ಮಹತ್ವದ ಅಂಶಗಳನ್ನು ತನಿಖೆಗೆ ಒಳಪಡಿಸಬೇಕಾದ ಹಿನ್ನೆಲೆ ಮತ್ತೆ ಕಸ್ಟಡಿಗೆ ನೀಡುವಂತೆ ಮನವಿ ಮಾಡಿದ್ರು.

ಅದರಂತೆ ದರ್ಶನ್ ಗ್ಯಾಂಗ್ ಹಾಗೂ ಸರ್ಕಾರಿ ವಕೀಲರ ವಾದವನ್ನು ಆಲಿಸದಂತಹ ನ್ಯಾಯಾಧೀಶರು ಮತ್ತೆ 5 ದಿನಗಳ ಕಾಲ ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ನೀಡಿ ಆದೇಶ ನೀಡಿದ್ದಾರೆ.

- Advertisement -
spot_img

Latest News

error: Content is protected !!