Thursday, June 4, 2026
Homeತಾಜಾ ಸುದ್ದಿಕಡಬದಲ್ಲಿ ಮತ್ತೆ ಕಾಣಿಸಿಕೊಂಡ ಕಾಡಾನೆಗಳು

ಕಡಬದಲ್ಲಿ ಮತ್ತೆ ಕಾಣಿಸಿಕೊಂಡ ಕಾಡಾನೆಗಳು

- Advertisement -
- Advertisement -

ಮಂಗಳೂರು: ಕಡಬದಲ್ಲಿ ಕಾಡಾನೆ ಇಬ್ಬರನ್ನು ಬಲಿ ಪಡೆದ ಘಟನೆ ಮಾಸುವ ಮುನ್ನವೇ ಕಡಬ ತಾಲೂಕಿನಲ್ಲಿ ಕಾಡಾನೆಗಳು ಮತ್ತೆ ಕಾಣಿಸಿಕೊಂಡಿವೆ.

ಐತೂರು ಭಾಗದ ಕೊಡೆಂಕೇರಿ, ಅಜನಾ ಎಂಬಲ್ಲಿ ಎರಡು ದೊಡ್ಡ ಆನೆಗಳೊಂದಿಗೆ ಒಂದು ಮರಿಯಾನೆ ಕಂಡುಬಂದಿದೆ.

ಇನ್ನು ರಬ್ಬರ್ ತೋಟಕ್ಕೆ ಲಗ್ಗೆಯಿಟ್ಟ ಕಾಡಾನೆಗಳನ್ನು ನೋಡಿದ ಜನರು ಆತಂಕಕ್ಕೊಳಗಾಗಿ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಅದರಂತೆ ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ಪರಿಶೀಲನೆ ನಡೆಸಿ ಎಚ್ಚರಿಕೆಯಿಂದ ಇರುವಂತೆ ಸೂಚಿಸಿದ್ದಾರೆ.

- Advertisement -

Latest News

error: Content is protected !!