Friday, June 5, 2026
Homeತಾಜಾ ಸುದ್ದಿಬರೋಬ್ಬರಿ 10 ತಿಂಗಳ‌ ಬಳಿಕ‌ ಶೈನ್ ಶೆಟ್ಟಿಗೆ ಸಿಕ್ತು ಬಿಗ್‌ಬಾಸ್ ನಲ್ಲಿ ವಿನ್ ಆದ ಕಾರು

ಬರೋಬ್ಬರಿ 10 ತಿಂಗಳ‌ ಬಳಿಕ‌ ಶೈನ್ ಶೆಟ್ಟಿಗೆ ಸಿಕ್ತು ಬಿಗ್‌ಬಾಸ್ ನಲ್ಲಿ ವಿನ್ ಆದ ಕಾರು

- Advertisement -
- Advertisement -

ಬೆಂಗಳೂರು; ಬಿಗ್ ಬಾಸ್ ಸೀಸನ್ 7 ಮುಗಿದು ಬರೋಬ್ಬರಿ 10 ತಿಂಗಳ ಬಳಿಕ ಬಿಗ್ ಬಾಸ್ ವಿನ್ನರ್ ಶೈನ್ ಶೆಟ್ಟಿ ಅವರಿಗೆ ಕಾರು‌ ಲಭಿಸಿದೆ.

ಬಿಗ್‍ಬಾಸ್ ಕಾರ್ಯಕ್ರಮದ ಪ್ರಯೋಜಕತ್ವವನ್ನು ಪಡೆದುಕೊಂಡಿದ್ದ, ಟಾಟಾ ಮೋಟರ್ಸ್ ಕಂಪನಿ ವಿನ್ನರ್ ಗೆ ಕಾರನ್ನು ಕೊಡುಗೆಯಾಗಿ ಕೊಡುವುದಾಗಿ ಹೇಳಿತ್ತು. ಅಂತೆಯೇ ಈಗ ಕಾರನ್ನು ಬಿಗ್‍ಬಾಸ್ ವಿನ್ನರ್ ಶೈನ್ ಶೆಟ್ಟಿ ಅವರಿಗೆ ನೀಡಿದೆ. ಈ ಕಾರನ್ನು ಮೊದಲೇ ನೀಡಬೇಕಿತ್ತು. ಆದರೆ ಹೊಸ ಮಾದರಿಯ ಕಾರನ್ನು ನೀಡುವ ಸಲುವಾಗಿ ಇಷ್ಟು ದಿನ ನೀಡಿರಲಿಲ್ಲ. ಈಗ ಟಾಟಾ ಮೋಟರ್ಸ್ ಅವರು ಉನ್ನತ ಮಟ್ಟದ ಟಾಟಾ ಆಲ್ಟ್ರೋಜ್ ಹೊಸ ಮಾದರಿಯ ಕಾರನ್ನು ಶೈನ್ ಶೆಟ್ಟಿಯವರಿಗೆ ನೀಡಿದೆ.

ಇನ್ನು ಈ ಬಗ್ಗೆ ಇನ್‍ಸ್ಟಾಗ್ರಾಮ್‍ನಲ್ಲಿ ವಿಡಿಯೋವನ್ನು ಹಂಚಿಕೊಂಡಿರುವ ಶೈನ್ ಶೆಟ್ಟಿ, ಟಾಟಾ ಆಲ್ಟ್ರೋಜ್ ಬಿಗ್‍ಬಾಸ್ ಸೀಸನ್-7 ಕಾರ್. ನಿಮ್ಮೆಲ್ಲರ ಆಶೀರ್ವಾದದಿಂದ ಈ ಕಾರು ನನಗೆ ದೊರಕಿರುವುದೆಂದು ಸಂತಸದಿಂದ ತಿಳಿಸ ಬಯಸುತ್ತೇನೆ. ಎಲ್ಲ ಕೆಲಸಗಳನ್ನು ಉತ್ತಮವಾಗಿ ನಿಭಾಯಿಸಿದ ಕೀ ಮೋಟರ್ಸ್ ಕನಕಪುರ ರೋಡ್ ಇವರಿಗೆ ಧನ್ಯವಾದಗಳು. ಹಾಗೆಯೇ ಕೊಡುಗೆ ನೀಡಿರುವ ಟಾಟಾ ಮೋಟರ್ಸ್ ಅವರಿಗೂ ಧನ್ಯವಾದ ಎಂದು ಶೈನ್ ತಿಳಿಸಿದ್ದಾರೆ.

- Advertisement -

Latest News

error: Content is protected !!