Monday, April 29, 2024
Homeತಾಜಾ ಸುದ್ದಿಹಿಬಾಬ್ ವಿವಾದ ವಿಚಾರ; ಸುಪ್ರೀಂ ಕೋರ್ಟ್ ನಲ್ಲಿ ಮೂರನೇ ದಿನವೂ ಅರ್ಜಿ ವಿಚಾರಣೆ ಮುಂದೂಡಿಕೆ

ಹಿಬಾಬ್ ವಿವಾದ ವಿಚಾರ; ಸುಪ್ರೀಂ ಕೋರ್ಟ್ ನಲ್ಲಿ ಮೂರನೇ ದಿನವೂ ಅರ್ಜಿ ವಿಚಾರಣೆ ಮುಂದೂಡಿಕೆ

spot_img
- Advertisement -
- Advertisement -

ನವದೆಹಲಿ: ಹಿಜಾಬ್ ಕುರಿತ ಹೈಕೋರ್ಟ್ ನೀಡಿದ​ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್ ನಲ್ಲಿ ಸಲ್ಲಿಸಲಾದ ಮೇಲ್ಮನವಿ ಅರ್ಜಿಗಳ ಮೂರನೇ ದಿನವೂ ಮುಂದೂಡಿಕೆಯಾಗಿದೆ. ಇಂದು ವಾದ- ಪ್ರತಿವಾದಿಗಳ ಬಳಿಕ ಮುಂದಿನ ವಿಚಾರಣೆಯನ್ನು ಸೋಮವಾರಕ್ಕೆ ಮಂದೂಡಲಾಗಿದೆ.

ವಾದ ಮಂಡಿಸಿದ್ದ ಹಿರಿಯ ವಕೀಲ ದೇವದತ್​ ಕಾಮತ್​ ಅವರು, ಬಟ್ಟೆಯ ವಿಚಾರದಲ್ಲಿ ಸರ್ಕಾರ ಮಕ್ಕಳ ಶಿಕ್ಷಣವನ್ನು ಹಾಳು ಮಾಡುತ್ತಿದೆ ಎಂದು ದೂರಿದ್ದರು. ಈ ವೇಳೆ ಪೀಠ, ಮಕ್ಕಳು ಶಾಲೆಯೊಳಗೆ ಮಿಡಿ, ಸ್ಕರ್ಟ್​ ಧರಿಸಿ ಬರಬಹುದೇ ಎಂದು ಪ್ರಶ್ನಿಸಿದ್ದರು. ಹೀಗಾಗಿ ಶಿಕ್ಷಣಕ್ಕೂ, ಬಟ್ಟೆಗೂ ಸಂಬಂಧವಿಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿತ್ತು.

ನಿನ್ನೆ ನಡೆದ ಎರಡನೇ ದಿನದ ವಿಚಾರಣೆಯಲ್ಲಿ ‘ಹಿಜಾಬ್​ ಧರಿಸುವುದು ಹಕ್ಕು’ ಎಂದು ವಾದ ಮಂಡಿಸಿದಾಗ ಕೋರ್ಟ್​, ಧರಿಸುವ ಹಕ್ಕಿದ್ದರೆ, ಅದನ್ನು ಧರಿಸದೇ ಇರುವ ಹಕ್ಕೂ ಇದೆ ಎಂದು ನ್ಯಾಯಾಧೀಶರು ಹೇಳಿದ್ದರು. ಮೇಲ್ಮನವಿ ಅರ್ಜಿಗಳನ್ನು ಸುಪ್ರೀಂಕೋರ್ಟ್​ನ ನ್ಯಾಯಮೂರ್ತಿಗಳಾದ ಹೇಮಂತ್ ಗುಪ್ತಾ ಮತ್ತು ಸುಧಾಂಶು ಧುಲಿಯಾ ಅವರಿದ್ದ ಪೀಠ ವಿಚಾರಣೆ ನಡೆಸಿತು.

- Advertisement -
spot_img

Latest News

error: Content is protected !!