Tuesday, May 14, 2024
Homeತಾಜಾ ಸುದ್ದಿಸೃಜನ್ ಲೊಕೇಶ್ ಹಾಗೂ ತನ್ನ ಮದುವೆ ಮುರಿದು ಬಿದ್ದದ್ದು ಯಾಕೆ? ಕೊನೆಗೂ ಈ ಬಗ್ಗೆ ಬಾಯ್ಬಿಟ್ಟ...

ಸೃಜನ್ ಲೊಕೇಶ್ ಹಾಗೂ ತನ್ನ ಮದುವೆ ಮುರಿದು ಬಿದ್ದದ್ದು ಯಾಕೆ? ಕೊನೆಗೂ ಈ ಬಗ್ಗೆ ಬಾಯ್ಬಿಟ್ಟ ನಟಿ ವಿಜಯಲಕ್ಷ್ಮೀ

spot_img
- Advertisement -
- Advertisement -

ಬೆಂಗಳೂರು: ನಟ ಸೃಜನ್ ಲೊಕೇಶ್‌ ಜತೆ ನಟಿ ವಿಜಯಲಕ್ಷ್ಮಿ ಮದ್ವೆ ಮುರಿದು ಹೋದ ಬಗ್ಗೆ ನಾನಾ ರೀತಿಯಲ್ಲಿ ನಾನಾ ಮಂದಿ ಹೇಳುತ್ತಿದ್ದರು, ಆದರೆ ಇದೆಕ್ಕೆಲ್ಲ ಖುದ್ದು ನಟಿ ವಿಜಯಲಕ್ಷ್ಮಿ ಅವರು ಉತ್ತರ ನೀಡಿದ್ದಾರೆ. ನಟ ಸೃಜನ್ ಲೋಕೆಶ್‌ ಜತೆ ಮದುವೆ ಮುರಿದುಕೊಂಡ ಬಗ್ಗೆ ದಶಕಗಳ ಬಳಿಕ ವಿಡಿಯೋವೊಂದರ ಮೂಲಕ ಉತ್ತರಿಸಿರುವ ನಟಿ ವಿಜಯಲಕ್ಷ್ಮಿ ಹೇಳಿದ್ದೇನು ಇಲ್ಲಿದೆ ನೋಡಿ ಅವರ ಮಾತಿನ ಪಿನ್‌ ಟು ಪಿನ್‌ ಮಾಹಿತಿ.

ನನ್ನ ತಂದೆ ಸಾವಿನ ನಂತರ ನಮ್ಮ ಮನೆ ಪರಿಸ್ಥಿತಿ ನೋಡಿ ಸೃಜನ್ ಲೋಕೆಶ್‌ ಅವರು ನನ್ನ ಮದುವೆಯಾಗಲು ಮುಂದೆ ಬಂದರು, ಈ ವೇಳೆ ಎಲ್ಲವೂ ಅಂದಕೊಂಡತೆ ಸೃಜನ್ ಲೋಕೆಶ್‌ ಅವರೊಂದಿಗೆ ನಿಶ್ಚಿತಾರ್ಥವನ್ನು ಅದ್ದೂರಿಯಾಗಿ ನಡೆಯಿತು, ಆದರೆ ಅದಾದ ಬಳಿಕ ಇಬ್ಬರ ಕುಟುಂಬಗಳ ಮದುವೆ ಆಚಾರ ವಿಚಾರಗಳಿಗೆ ಸಂಬಂಧಪಟ್ಟಂತೆ ಪ್ರತಿರೋಧ ಹಾಗೂ ಒಮ್ಮತ ನಿರ್ಧಾರಗಳು ಮೂಡಿ ಬಾರದ ಹಿನ್ನಲೆಯಲ್ಲಿ ಇಬ್ಬರು ಮದುವೆಯಾಗಲಿಲ್ಲ ಅಂಥ ಹೇಳಿದ್ದು, ಈ ಮೂಲಕ ದಶಕಗಳ ಪ್ರಶ್ನೆಗೆ ಉತ್ತರ ನೀಡಿದ್ದಾರೆ. ಇದೇ ವೇಳೆ ಅವರು ಕೆಲವು ಮಾಧ್ಯಮಗಳು ನಾನು ಸೃಜನ್‌ ಲೋಕೆಶ್‌ ಅವರಿಗೆ ಮೋಸ ಮಾಡಿದ್ದರಿಂದ ನನಗೆ ಈಗ ಈ ರೀತಿಯಲ್ಲಿ ಆಗಿದೆ ಅಂತ ಹಲವು ಮಂದಿ ಮಾತನಾಡುತ್ತಿದ್ದಾರೆ ಅಂತ ಬೇಸರ ವ್ಯಕ್ತಪಡಿಸಿದ್ದಾರೆ.

ಇನ್ನೂ ಸೃಜನ್ ಲೋಕೆಶ್‌ ಅವರಿಗೆ ಮೋಸ ಮಾಡಿದ್ದರಿಂದಲೇ ನನಗೆ ಈ ರೀತಿಯಾಗಿದೆ ಅನ್ನೋಂದು ಶುದ್ದು ಸುಳ್ಳು, ನನ್ನ ಹಾಗೂ ಸೃಜನ್‌ ಅವರ ನಡುವೆ ಯಾವುದೇ ರೀತಿಯಲ್ಲಿ ಅನುಮಾನಗಳು ಇರಲಿಲ್ಲ ಅಂಥ ಹೇಳಿರುವ ಅವರು ಸೃಜನ್  ಅವರ ನಡತೆಯನ್ನು ಮೆಚ್ಚುಕೊಂಡಿದ್ದಾರೆ ಕೂಡ. ನನ್ನ ಹಾಗೂ ಸೃಜನ್ ಲೊಕೇಶ್‌ ಅವರ ಬಗ್ಗೆ ಕೇಳಿ ಬರುತ್ತಿರುವ ಮಾತುಗಳು ಸಂಪೂರ್ಣ ಸುಳ್ಳು ಅಂತ ಅವರು ಹೇಳಿದ್ದಾರೆ. ಸೃಜನ್ ಲೊಕೇಶ್ ಗೆ ಒಳ್ಳೆದು ಬಯಸಿದೇ ಅದೇ ತಪ್ಪಾ ಅಂತ ಇದೇ ವೇಲೆ ಅವರು ಸುಖ ಸುಮ್ಮನೆ ಮಾತನಾಡುತ್ತಿರುವವರಿಗೆ ಕೇಳಿದ್ದಾರೆ.

- Advertisement -
spot_img

Latest News

error: Content is protected !!