Thursday, June 25, 2026
Homeಅಪರಾಧನಟಿ ರನ್ಯಾ ರಾವ್ ಬಂಧನ ಪ್ರಕರಣ; ಸ್ಫೋಟಕ ತಿರುವು ಪಡೆದ ಚಿನ್ನ ಕಳ್ಳಸಾಗಣೆ

ನಟಿ ರನ್ಯಾ ರಾವ್ ಬಂಧನ ಪ್ರಕರಣ; ಸ್ಫೋಟಕ ತಿರುವು ಪಡೆದ ಚಿನ್ನ ಕಳ್ಳಸಾಗಣೆ

- Advertisement -
- Advertisement -

ಬೆಂಗಳೂರು: ಏರ್ಪೋರ್ಟ್‌ನಲ್ಲಿ ಅಕ್ರಮ ಚಿನ್ನ ಕಳ್ಳಸಾಗಣೆ ಮಾಡುತ್ತಿದ್ದ ವೇಳೆ ನಟಿ ರನ್ಯಾ ರಾವ್ ಅವರು ಸಿಕ್ಕಿಬಿದ್ದು ಬಂಧನವಾಗಿದ್ದು, ಇದೀಗ ಪ್ರಕರಣಕ್ಕೆ ಮತ್ತೊಂದು ಸ್ಫೋಟಕ ತಿರುವು ಸಿಕ್ಕಿದೆ.

ಮಾಹಿತಿಯ ಪ್ರಕಾರ ರನ್ಯಾ ಕೇವಲ ಪಾತ್ರಧಾರಿ ಪ್ರಕರಣದ ಕುರಿತ ಅಸಲಿ ಕಿಂಗ್ ಬೇರೆಯವರಿದ್ದಾರೆ ಎಂದು ನಟಿ ರನ್ಯಾರನ್ನು ಬಂಧಿಸಿರುವ ಡಿಆರ್‌ಐ ಅಧಿಕಾರಿಗಳ ತನಿಖೆಯಲ್ಲಿ ಬಯಲಾಗಿದೆ. ಇನ್ನು ಈ ಚಿನ್ನ ಅಕ್ರಮ ಸಾಗಾಟ ಪ್ರಕರಣದಲ್ಲಿ ಏರ್ಪೋರ್ಟ್‌ನ ಕೆಲ ಅಧಿಕಾರಿಗಳು ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ. 

ಇನ್ನು ಬಲ್ಲ ಮೂಲಗಳ ಪ್ರಕಾರ ನಟಿ ರನ್ಯಾ 17 ಕೋಟಿ ಬೆಲೆಯ ಚಿನ್ನ ಖರೀದಿ ಮಾಡುವಷ್ಟು ಶ್ರೀಮಂತಳಲ್ಲ. ಆಕೆ ಹಿರಿಯ ಪೊಲೀಸ್ ಅಧಿಕಾರಿಯ ಮಲಮಗಳಾಗಿದ್ದು, ಆಕೆಯನ್ನು ಬಳಸಿಕೊಂಡರೆ ಸುಲಭವಾಗಿ ಚಿನ್ನ ಸಾಗಾಟ ಮಾಡಬಹುದು ಎನ್ನುವ ನಿಟ್ಟಿನಲ್ಲಿ ಇಂತಹ ಲೆಕ್ಕಾಚಾರವನ್ನು ಹಾಕಲಾಗಿದೆ ಎನ್ನಲಾಗುತ್ತಿದೆ. ಅಷ್ಟೇ ಅಲ್ಲದೆ ಆಕೆಗೆ ಚಿನ್ನ ಸಾಗಾಟದಲ್ಲಿ ಕೆಜಿಗೆ ನಾಲ್ಕರಿಂದ ಐದು ಲಕ್ಷ ಕಮಿಷನ್ ನೀಡುತ್ತಿರುವ ಬಗ್ಗೆಯೂ ಮಾಹಿತಿ ಲಭಿಸಿದೆ. 

ಇದೀಗ ರನ್ಯಾ ಬೆಂಗಳೂರಿಗೆ ತಂದ ಚಿನ್ನವನ್ನು ಯಾರಿಗೆ ಕೊಡುತ್ತಿದ್ದರು ಎನ್ನುವ ಬಗ್ಗೆ ಅಧಿಕಾರಿಗಳು ತನಿಖೆ ನಡೆಸಲಾಗುತ್ತಿದೆ

- Advertisement -

Latest News

error: Content is protected !!