Saturday, June 6, 2026
Homeಆರಾಧನಾಕುತ್ತಾರು ಕೊರಗಜ್ಜ ದೈವದ ಆದಿಕ್ಷೇತ್ರಕ್ಕೆ ಆಗಮಿಸಿದ ನಟಿ ರಕ್ಷಿತಾ ಪ್ರೇಮ್; ಹರಕೆ ರೂಪವಾಗಿ ಬೆಳ್ಳಿ ದೀಪ...

ಕುತ್ತಾರು ಕೊರಗಜ್ಜ ದೈವದ ಆದಿಕ್ಷೇತ್ರಕ್ಕೆ ಆಗಮಿಸಿದ ನಟಿ ರಕ್ಷಿತಾ ಪ್ರೇಮ್; ಹರಕೆ ರೂಪವಾಗಿ ಬೆಳ್ಳಿ ದೀಪ ಮತ್ತು ಘಂಟೆ ಸಲ್ಲಿಕೆ!

- Advertisement -
- Advertisement -

ಉಳ್ಳಾಲ: ಕುತ್ತಾರು ಕೊರಗಜ್ಜ ದೈವದ ಆದಿಕ್ಷೇತ್ರಕ್ಕೆ ಇಂದು ಮಧಾಹ್ನ ಖ್ಯಾತ ನಟಿ ರಕ್ಷಿತಾ ಪ್ರೇಮ್ ಆಗಮಿಸಿ ಬೆಳ್ಳಿ ದೀಪ ಮತ್ತು ಬೆಳ್ಳಿಯ ಘಂಟೆಯನ್ನು ಹರಕೆಯಾಗಿ ಸಲ್ಲಿಸಿದ್ದಾರೆ.

ಮಂಗಳೂರು ಹೊರವಲಯದ ಕುತ್ತಾರು ಸ್ವಾಮಿ ಕೊರಗಜ್ಜ ದೈವದ ಆದಿ ಕ್ಷೇತ್ರಕ್ಕೆ ಇಂದು ಮಧ್ಯಾಹ್ನ
ಭೇಟಿ ನೀಡಿ ಇಷ್ಟಾರ್ಥ ಈಡೇರಿಸಿದ್ದಕ್ಕಾಗಿ ಹರಕೆ ರೂಪವಾಗಿ ಬೆಳ್ಳಿಯ ದೀಪ, ಘಂಟೆಯನ್ನು ಸಲ್ಲಿಸಿದ್ದಾರೆ.

ನಿನ್ನೆ ಪೊಳಲಿ ಶ್ರೀ ರಾಜರಾಜೇಶ್ವರಿ ಮತ್ತು ಕಟೀಲು ದುರ್ಗಾಪರಮೇಶ್ವರಿ ಕ್ಷೇತ್ರ ದರ್ಶನ ನಡೆಸಿದ ರಕ್ಷಿತಾ ಪ್ರೇಮ್ ಅವರು ಇಂದು ಕುತ್ತಾರು ಕೊರಗಜ್ಜನ ಆದಿ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಈ ಸಂಧರ್ಭದಲ್ಲಿ ಕೋಸ್ಟಲ್ ವುಡ್ ಖಳ ನಟ ಕಿಶೋರ್ ಡಿ.ಕೆ, ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋನಲ್ಲಿ ಮಿಂಚಿದ್ದ ಕಲಾವಿದರಾದ ಧೀರಜ್ ನೀರುಮಾರ್ಗ, ಸೂರಜ್ ಪಾಂಡೇಶ್ವರ, ಬೆಂಗಳೂರಿನ ಖ್ಯಾತ ಕೊರಿಯೋಗ್ರಾಫರ್ ರಾಹುಲ್ ಜೊತೆಗಿದ್ದರು.

- Advertisement -

Latest News

error: Content is protected !!