Saturday, October 17, 2026
Homeತಾಜಾ ಸುದ್ದಿನಟಿ ರಾಗಿಣಿಗಾಗಿ ಹೆಂಡತಿ ಮತ್ತು 8 ವರ್ಷದ ಮಗಳನ್ನು ಬಿಟ್ಟು ಬಂದಿದ್ದ ರವಿಶಂಕರ್ !

ನಟಿ ರಾಗಿಣಿಗಾಗಿ ಹೆಂಡತಿ ಮತ್ತು 8 ವರ್ಷದ ಮಗಳನ್ನು ಬಿಟ್ಟು ಬಂದಿದ್ದ ರವಿಶಂಕರ್ !

- Advertisement -
- Advertisement -

ಬೆಂಗಳೂರು: ಚಂದನವನದಲ್ಲಿ ಡ್ರಗ್ಸ್ ದಂಧೆ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಈಗಾಗಲೇ ಇಬ್ಬರು ನಟಿಯರನ್ನು ಸಿಸಿಬಿ ಬಂಧಿಸಿ ವಿಚಾರಣೆ ಮಾಡುತ್ತಿದೆ. ಇದರ ಬೆನ್ನಲ್ಲೇ ನಟಿಯರ ವೈಯಕ್ತಿಕ ವಿಚಾರಗಳು ಹೊರ ಬರುತ್ತಿವೆ. ನಿನ್ನೆಯಷ್ಟೆ ಸಂಜನಾ ಮದುವೆ ಫೋಟೋ ಒಂದು ವೈರಲ್ ಆಗಿತ್ತು. ಈ ವಿಚಾರ ಹಸಿಹಸಿಯಾಗಿರುವಾಗಲೇ ರಾಗಿಣಿಯ ವೈಯಕ್ತಿಕ ವಿಚಾರ ಬಹಿರಂಗಗೊಂಡಿದೆ.

ಆರ್​ಟಿಒ ಕಚೇರಿಯಲ್ಲಿ ದ್ವಿತೀಯ ದರ್ಜೆ ಕ್ಲರ್ಕ್ ಆಗಿದ್ದ ರವಿಶಂಕರ್​ ಸ್ಯಾಂಡಲ್​ವುಡ್​ ನಟಿ ರಾಗಿಣಿ ದ್ವಿವೇದಿಯ ಆಪ್ತ. ಸದ್ಯ ಡ್ರಗ್ಸ್​ ಕೇಸ್​ನಲ್ಲಿ ಸಿಸಿಬಿ ಪೊಲೀಸರಿಂದ ಬಂಧನಕ್ಕೊಳಪಟ್ಟಿದ್ದು, ಸರ್ಕಾರಿ ಕೆಲಸದಿಂದ ಅಮಾನತಿಗೂ ಒಳಗಾಗಿದ್ದಾನೆ. ತಂದೆಯ ನಿಧನದ ಬಳಿಕ ಅನುಕಂಪದ ಆಧಾರದಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದ. ಇವನಿಗೆ ಬರುತ್ತಿದ್ದದ್ದು ಮಾಸಿಕ ಸುಮಾರು 30 ಸಾವಿರ ಸಂಬಳ. ಆದರೆ ಈತ ನಡೆಸುತ್ತಿದ್ದದ್ದು ಮಾತ್ರ ಐಶಾರಾಮಿ ಜೀವನ. ಮದುವೆ ಆಗಿ ಮಗು ಇದ್ದರೂ ಪತ್ನಿಯನ್ನು ತೊರೆದಿದ್ದ. ಇದೆಲ್ಲವೂ ನಟಿ ರಾಗಿಣಿಗಾಗಿ!

ಹೌದು, ರವಿಶಂಕರ್‌ಗೆ ಮದುವೆಯಾಗಿ ಮಗು ಕೂಡ ಇದೆ. ಆದರೆ ಈಗ ಅವರೆಲ್ಲಾ ಒಟ್ಟಿಗಿಲ್ಲ ಎಂದು ಹೇಳಲಾಗುತ್ತಿದೆ. ರಾಗಿಣಿಗಾಗಿ ತಾಳಿಕಟ್ಟಿದ ಹೆಂಡತಿ ಹಾಗೂ ಮಗುವನ್ನು ದೂರ ಮಾಡಿಕೊಂಡಿದ್ದ ಎಂಬ ವಿಚಾರ ಗೊತ್ತಾಗಿದೆ.

ರಾಗಿಣಿ ಜೊತೆಯಲ್ಲಿ ತೀರಾ ಆಪ್ತನಾಗಿದ್ದ ರವಿಶಂಕರ್ ಮಗುವಿನ ಬಗ್ಗೆಯೂ ಪ್ರೀತಿ ಇಟ್ಟುಕೊಂಡಿದ್ದಿಲ್ಲ ಎನ್ನಲಾಗಿದೆ. ಸದಾ ರಾಗಿಣಿ ಹಾಗೂ ಆಕೆಯ ಜೊತೆ ಪಾರ್ಟಿಯಲ್ಲಿಯೇ ಇರುತ್ತಿದ್ದನಂತೆ. ನಟಿಗಾಗಿ ಕುಟುಂಬವನ್ನೇ ಬಿಟ್ಟಿದ್ದಾನೆ ಈ ಭೂಪ.

- Advertisement -

Latest News

error: Content is protected !!