Wednesday, June 3, 2026
Homeಕರಾವಳಿಉಡುಪಿಉಡುಪಿ: ಕಾಪುವಿನ ಮಾರಿಗುಡಿಗೆ ನಟಿ ಪೂಜಾ ಹೆಗ್ಡೆ ಭೇಟಿ

ಉಡುಪಿ: ಕಾಪುವಿನ ಮಾರಿಗುಡಿಗೆ ನಟಿ ಪೂಜಾ ಹೆಗ್ಡೆ ಭೇಟಿ

- Advertisement -
- Advertisement -

ಉಡುಪಿ: ಬಾಲಿವುಡ್ ಮತ್ತು ಸೌತ್ ಇಂಡಿಯಾ ಸಿನಿಮಾ ನಟಿ ಪೂಜಾ ಹೆಗ್ಡೆ ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಮಾರಿಗುಡಿಗೆ ಭೇಟಿ ನೀಡಿದರು.

ದೇವಿಯ ಸನ್ನಿಧಾನದಲ್ಲಿ ನಡೆಯುವ ಸಾಂಪ್ರದಾಯಿಕ ದರ್ಶನ ಸೇವೆಯಲ್ಲಿ ಭಾಗವಹಿಸಿದ್ದರು. ಸನ್ನಿಧಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ದರ್ಶನ ಸೇವೆಯಲ್ಲಿ ಪಾತ್ರಿಗಳಿಂದ ಆಶೀರ್ವಾದ ಪಡೆದರು.

ಈ ಹಿಂದೆಯೂ ಮಾರಿಗುಡಿಗೆ ಬಂದಿದ್ದ ಪೂಜಾ ಹೆಗ್ಡೆ ಕ್ಷೇತ್ರದ ಬಗ್ಗೆ ತಮಗಿರುವ ಅಗಾಧ ಭಕ್ತಿ ಹಾಗೂ ಪ್ರೀತಿಯನ್ನು ಈ ವೇಳೆ ವ್ಯಕ್ತಪಡಿಸಿದರು. ಕುಟುಂಬ ಸದಸ್ಯರೊಂದಿಗೆ ದೇವಾಲಯದ ಆವರಣದಲ್ಲಿ ಕೆಲ ಕಾಲ ಕಳೆದರು. ಬಾಲಿವುಡ್ ಮಾತ್ರವಲ್ಲವೇ ತೆಲುಗು ತಮಿಳು ಸಿನಿಮಾಗಳಲ್ಲಿ ನಟಿಸಿ ಮನೆಮಾತಾಗಿರುವ ಪೂಜಾ ಹೆಗ್ಡೆ ಮೂಲತಃ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ತಾಲೂಕಿನವರು.

- Advertisement -

Latest News

error: Content is protected !!