- Advertisement -
![]()
- Advertisement -
ಸುಬ್ರಮಣ್ಯ: ಬಹುಭಾಷಾ ಚಲನಚಿತ್ರ ನಟಿ ನಯನತಾರಾ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ.
ಪತಿ ವಿಘ್ನೇಶ್ ಶಿವನ್ ಜೊತೆ ನಿನ್ನೆ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿದ್ದ ನಯನತಾರಾ ಸರ್ಪ ಸಂಸ್ಕಾರ ಪೂಜೆ ಸೇವೆ ನಡೆಸಿದ್ದಾರೆ.
ಇದೇ ವೇಳೆ ನಯನತಾರಾ ಮತ್ತು ವಿಘ್ನೇಶ್ ಶಿವನ್ ಅವರಿಗೆ ಶ್ರೀ ಕ್ಷೇತ್ರದ ವತಿಯಿಂದ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ ಶಾಲು ಹೊದಿಸಿ ಗೌರವ ಸಲ್ಲಿಸಿದರು.
ಕೆಲವು ಸಮಯದ ಹಿಂದಷ್ಟೇ ಬಾಲಿವುಡ್ ನಟಿ ಕತ್ರೀನಾ ಕೈಫ್ ಕೂಡಾ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದರು.
- Advertisement -


