Tuesday, April 30, 2024
Homeತಾಜಾ ಸುದ್ದಿಮಂಗಳೂರು ಮೂಲದ ನಟಿ ಮಾನ್ವಿತಾ ಕಾಮತ್ ತಾಯಿ ನಿಧನ

ಮಂಗಳೂರು ಮೂಲದ ನಟಿ ಮಾನ್ವಿತಾ ಕಾಮತ್ ತಾಯಿ ನಿಧನ

spot_img
- Advertisement -
- Advertisement -

ಬೆಂಗಳೂರು : ಮಂಗಳೂರು ಮೂಲದ ನಟಿ ಮಾನ್ವಿತಾ ಕಾಮತ್ ತಾಯಿ ಸುಜಾತಾ ಕಾಮತ್‌  ಕಿಡ್ನಿ ವೈಫಲ್ಯ ಬಳಲುತ್ತಿದ್ದು ಚಿಕಿತ್ಸೆ ಫಲಕಾರಿಯಾಗದೇ ನಿಧನ ಹೊಂದಿದ್ದಾರೆ . ಮಾನ್ವಿತಾ ಕಾಮತ್‌ ತಾಯಿ ಸುಜಾತಾ ಕಾಮತ್‌ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು, ಇತ್ತೀಚಿಗೆ ಕಿಡ್ನಿ ಕಸಿ ಮಾಡಿಸಲಾಗಿತ್ತು.

ಚಿಕಿತ್ಸೆ ಫಲಕಾರಿಯಾಗದೇ ಇಂದು ಕೊನೆಯುಸಿರೆಳೆದಿದ್ದಾರೆ. ಮಾನ್ವಿತಾ ಕಾಮತ್‌ ತಾಯಿ ಸುಜಾತಾ ಕಾಮತ್‌ ಅ ಅವರಿಗೆ ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ಸುಜಾತಾಗೆ ಚಿಕಿತ್ಸೆ ನೀಡಲಾಗುತ್ತಿತ್ತು. ತಾಯಿ ಪ್ರಾಣ ಉಳಿಸಲು ಲಕ್ಷಾಂತರ ಹಣ ಖರ್ಚು ಮಾಡಿದ್ರು ಜೀವ ಉಳಿಸಿಕೊಳ್ಳಲು ಆಗಲಿಲ್ಲ ಎಂದು ಮಗಳು ಮಾನ್ವಿತಾ ಕಾಮತ್ ದುಃಖಿತರಾಗಿದ್ದಾರೆ .

ನಟಿ ಮಾನ್ವಿತ ಕಾಮತ್‌ 2015ರಲ್ಲಿ ತೆರೆಗೆ ಬಂದ ‘ಕೆಂಡಸಂಪಿಗೆ’ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟಿದ್ದು ಕನ್ನಡ ಚಿತ್ರ ರಂಗದಲ್ಲಿ ಭಾರೀ ಟಗರು ಚಿತ್ರದ ಮೂಲಕ ಎಲ್ಲರಿಗೂ ಚಿರಪರಿಚಿತರಗಿದ್ದಾರೆ

ಅಷ್ಟೇ ಅಲ್ಲದೇ ಮಾನ್ವಿತಾ ಕಾಮತ್ ತಾಯಿ ಸುಜಾತಾ ಕಾಮತ್‌ ಆರೋಗ್ಯದ ಚಿಕಿತ್ಸೆಗಾಗಿ ಈ ಹಿಂದೆ ಸೋನು ಸೂದ್ ಸಹ ಸಹಾಯ ಹಸ್ತ ಚಾಚಿದ್ದರು. ಈ ಬಗ್ಗೆ ಮಾನ್ವಿತಾ ಅವರೇ ಟ್ವೀಟ್‌ ಮೂಲಕ ಹಂಚಿಕೊಂಡಿದ್ದಲ್ಲದೇ ನಿಮ್ಮಿಂದಾಗಿ ನನ್ನ ತಾಯಿ ಇಂದು ಚೇತರಿಸಿಕೊಳ್ಳುತ್ತಿದ್ದಾರೆ’ ಎಂದು ಮಾನ್ವಿತಾ ಬರೆದುಕೊಳ್ಳುವ ಮೂಲಕ ಧನ್ಯವಾದವನ್ನು ಸಲ್ಲಿಸಿದ್ದಾರೆ ಎಂದು ತಿಳಿಯಲಾಗಿದೆ.

- Advertisement -
spot_img

Latest News

error: Content is protected !!