- Advertisement -
- Advertisement -
ತುಮಕೂರು; ನಿರ್ಮಾಪಕ ಕೆ ಮಂಜು ಪುತ್ರ ನಟ ಶ್ರೇಯಸ್ ಕಾರು ಅಪಘಾತವಾಗಿದೆ. ಶ್ರೇಯಸ್ ಕೆ.ಮಂಜು ಪ್ರಯಾಣ ಮಾಡುತ್ತಿದ್ದ ಕಾರು ದಾವಣಗೆರೆಗೆ ತೆರಳುತ್ತಿದ್ದಾಗ ಈ ಅಪಘಾತ ಸಂಭವಿಸಿದೆ.
ʼವಿಷ್ಣು ಪ್ರಿಯಾʼ ಸಿನಿಮಾದ ಪ್ರಮೋಷನ್‌ಗೆಂದು ಬೆಂಗಳೂರಿನಿಂದ ದಾವಣಗೆರೆಗೆ ಶ್ರೇಯಸ್ ತಮ್ಮ ಬಿಎಂಡಬ್ಲ್ಯೂ ಕಾರಿನಲ್ಲಿ ತೆರಳುತ್ತಿದ್ದಾಗ ತುಮಕೂರಿನ ಶಿರಾ ಬಳಿ ಲಾರಿ ನಡುವೆ ಅಪಘಾತ ಸಂಭವಿಸಿದೆ. ಓವರ್‌ಟೇಕ್ ಮಾಡುವ ಭರದಲ್ಲಿ ಲಾರಿಯೊಂದು ಕಾರಿಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಕಾರಿನ ಮಿರರ್ ಮುರಿದಿದ್ದು, ಸಾಕಷ್ಟು ಡೆಂಟ್ ಆಗಿದೆ ಎನ್ನಲಾಗಿದೆ.
ಈ ಘಟನೆಯಲ್ಲಿ ನಟ ಶ್ರೇಯಸ್‌ಗೆ ಯಾವುದೇ ಗಾಯವಾಗಿಲ್ಲ. ಪೊಲೀಸರು ಸ್ಥಳಕ್ಕೆ ಬಂದಿದ್ದು, ಈ ಘಟನೆ ಕುರಿತು ನಟ ಶ್ರೇಯಸ್‌ರಿಂದ ಪೊಲೀಸರು ಮಾಹಿತಿ ಪಡೆದಿದ್ದಾರೆ. ಪೊಲೀಸರು ದೂರು ದಾಖಲು ಮಾಡಿಕೊಂಡಿದ್ದಾರೆ.
- Advertisement -