Friday, April 19, 2024
Homeತಾಜಾ ಸುದ್ದಿನಾಳೆ ನಟ ರಮೇಶ್ ಅರವಿಂದ್ ಬರ್ತಡೇ ; ಅಭಿಮಾನಿಗಳಿಗೆ ಬಂಪರ್ ಅವಕಾಶವೊಂದನ್ನು ನೀಡಿದ ಹಿರಿಯ ನಟ

ನಾಳೆ ನಟ ರಮೇಶ್ ಅರವಿಂದ್ ಬರ್ತಡೇ ; ಅಭಿಮಾನಿಗಳಿಗೆ ಬಂಪರ್ ಅವಕಾಶವೊಂದನ್ನು ನೀಡಿದ ಹಿರಿಯ ನಟ

spot_img
- Advertisement -
- Advertisement -

ಬೆಂಗಳೂರು: ನಾಳೆ ನಟ ರಮೇಶ್ ಅರವಿಂದ್ ಅವರು ತಮ್ಮ ಬರ್ತಡೇಯನ್ನು ಆಚರಿಸಿಕೊಳ್ಳುತ್ತಿದ್ದಾರೆ. ಹೀಗಿರುವಾಗ ಹಿರಿಯ ನಟ ಅಭಿಮಾನಿಗಳಿಗೊಂದು ಬಂಪರ್ ಅವಕಾಶ ನೀಡಿದ್ದಾರೆ.

ರಮೇಶ್​ ಅರವಿಂದ್ ​ಅವರಿಗೆ ಅಭಿಮಾನಿಗಳು ವಾಟ್ಸಪ್​ ಸಂದೇಶ ಕಳಿಸುವ ಮೂಲಕ ​ಹುಟ್ಟುಹಬ್ಬದ ಶುಭಾಶಯ ತಿಳಿಸಬಹುದು. ಅಲ್ಲದೇ,​ ಅವರಿಗೆ ಏನಾದರೂ ಪ್ರಶ್ನೆಗಳನ್ನೂ ಕೇಳಬಹುದು. ಅದಕ್ಕಾಗಿ ಅಭಿಮಾನಿಗಳಿಗಾಗಿ ಅವರು ಫೋನ್​ ನಂಬರ್​ ನೀಡಿದ್ದಾರೆ. ಆ ನಂಬರ್​ಗೆ ವಾಟ್ಸಾಪ್​ ಸಂದೇಶ ಕಳಿಸುವ ಮೂಲಕ ನೆಚ್ಚಿನ ನಟನಿಗೆ ಫ್ಯಾನ್ಸ್ ವಿಶ್​ ಮಾಡಬಹುದು.

ಅಭಿಮಾನಿಗಳು 8951599009 ಮತ್ತು 8951699009 ಮೊಬೈಲ್​ ಸಂಖ್ಯೆಗೆ ವಾಟ್ಸಪ್​ ಸಂದೇಶ ಕಳಿಸುವ ಮೂಲಕ ರಮೇಶ್​ ಅರವಿಂದ್​ ಹುಟ್ಟುಹಬ್ಬಕ್ಕೆ ಶುಭ ಹಾರೈಸಬಹುದು.ಬರೀ ವಿಶ್​ ಮಾಡುವುದು ಮಾತ್ರವಲ್ಲದೇ ರಮೇಶ್​ ಅರವಿಂದ್​ ಅವರಿಗೆ ಏನಾದರೂ ಪ್ರಶ್ನೆಗಳನ್ನೂ ಕೇಳಬಹುದು. ಹೀಗೆ ಮೆಸೇಜ್ ಮಾಡುವಾಗ ನಿಮ್ಮ ಹೆಸರು, ಊರು ಮತ್ತು ಜಿಲ್ಲೆಯನ್ನು ತಪ್ಪದೇ ನಮೂದಿಸಿರಬೇಕು. ಮೆಸೇಜ್​ ಮಾಡಿದ ಪ್ರತಿಯೊಬ್ಬರಿಗೂ ರಮೇಶ್​ ಅರವಿಂದ್​ ಅವರೇ ಸ್ವತಃ ಪ್ರತಿಕ್ರಿಯೆ ನೀಡಲಿದ್ದಾರೆ. ಎಲ್ಲರಿಗಿಂತ ವಿಭಿನ್ನವಾಗಿ ಶುಭಾಶಯ ತಿಳಿಸಿದವರಿಗೆ ಖುದ್ದಾಗಿ ರಮೇಶ್ ಅರವಿಂದ್ ಕರೆ ಮಾಡಿ ಮಾತನಾಡಲಿದ್ದಾರೆ ಎಂಬುದು ವಿಶೇಷ.

- Advertisement -
spot_img

Latest News

error: Content is protected !!