Friday, June 5, 2026
Homeತಾಜಾ ಸುದ್ದಿಕನ್ನಡದ ನಟಿ ನಿಕ್ಕಿ ಗಲ್ರಾನಿಗೆ ಕೊರೋನಾ ಪಾಸಿಟಿವ್​!

ಕನ್ನಡದ ನಟಿ ನಿಕ್ಕಿ ಗಲ್ರಾನಿಗೆ ಕೊರೋನಾ ಪಾಸಿಟಿವ್​!

- Advertisement -
- Advertisement -

ಬೆಂಗಳೂರು: ಕನ್ನಡ ಸೇರಿದಂತೆ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಹೆಚ್ಚು ಗುರುತಿಸಿಕೊಂಡಿರುವ ನಟಿ ನಿಕ್ಕಿ ಗಲ್ರಾನಿಗೂ ಕೋವಿಡ್ ಸೋಂಕು ತಗುಲಿರುವುದು ದೃಢವಾಗಿದೆ.

ಈ ವಿಚಾರವನ್ನು ಸೋಷಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿಕೊಂಡಿರುವ ನಿಕ್ಕಿ, ‘ಕಳೆದ ಒಂದು ವಾರದ ಹಿಂದೆಯೇ ನನಗೆ ಕರೊನಾ ಸೋಂಕು ತಗುಲಿದೆ. ಆರೋಗ್ಯದಲ್ಲಿ ಮೊದಲಿಗಿಂತ ಚೇತರಿಕೆ ಕಂಡುಬಂದಿದೆ. ನನ್ನ ಚೇತರಿಕೆಗೆ ಪ್ರಾರ್ಥಿಸಿದ ಎಲ್ಲರಿಗೂ ಮತ್ತು ಆರೋಗ್ಯ ಸೇವೆಯಲ್ಲಿ ಮುಂಚೂಣಿಯಲ್ಲಿ ಕೆಲಸ ಮಾಡುತ್ತಿರುವವರಿಗೆ ನನ್ನ ಹೃದಯಪೂರ್ವಕ ಧನ್ಯವಾದಗಳು ಎಂದಿದ್ದಾರೆ.

ನಿಕ್ಕಿ ಗಲ್ರಾನಿ ದಕ್ಷಿಣ ಭಾರತ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟಿ ಮತ್ತು ರೂಪದರ್ಶಿ. ಇವರ ಸಹೋದರಿ ಸಂಜನಾ ಗಲ್ರಾನಿ ಕೂಡ ಪ್ರಸಿದ್ಧ ನಟಿ. ಮಲಯಾಳಂ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟವರು ನಿಕ್ಕಿ ಗಲ್ರಾನಿ. ಮೊದಲ ಸಿನಿಮಾದಲ್ಲೇ ನಿಕ್ಕಿ ಗಲ್ರಾನಿ ಫಿಲ್ಮ್​ಫೇರ್, ಸೈಮಾ ಪ್ರಶಸ್ತಿಗಳನ್ನುಪಡೆದವರು.

- Advertisement -

Latest News

error: Content is protected !!