Thursday, June 4, 2026
Homeಪ್ರಮುಖ-ಸುದ್ದಿಬಾಲಿವುಡ್ ಯುವ ನಟ ಮೋಹಿತ್ ಬಘೇಲ್ ನಿಧನ

ಬಾಲಿವುಡ್ ಯುವ ನಟ ಮೋಹಿತ್ ಬಘೇಲ್ ನಿಧನ

- Advertisement -
- Advertisement -

ಕೊರೊನಾ ವೈರಸ್‌ ಹರಡುತ್ತಿರುವ ಈ ಸಂಧಿಗ್ಧ ಸಂದರ್ಭದಲ್ಲಿ ಚಿತ್ರರಂಗಕ್ಕೆ ಮೇಲಿಂದ ಮೇಲೆ ಆಘಾತ ಎದುರಾಗುತ್ತಲೇ ಇದೆ. ರಿಷಿ ಕಪೂರ್‌, ಇರ್ಫಾನ್‌ ಖಾನ್‌ ನಿಧನದ ನೋವು ಇನ್ನೂ ಹಸಿಯಾಗಿರುವಾಗಲೇ ಮತ್ತೋರ್ವ ಬಾಲಿವುಡ್ ನಟ ಇಹಲೋಕ ತ್ಯಜಿಸಿದ್ದಾರೆ. ಮಥುರಾದಲ್ಲಿ ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆಯುತ್ತಿದ್ದ ಹಾಸ್ಯ ನಟ ಮೋಹಿತ್‌ ಬಘೇಲ್‌ ಶನಿವಾರ ಕೊನೆಯುಸಿರೆಳೆದರು.

ಮೂಲತಃ ಉತ್ತರ ಪ್ರದೇಶದವರಾದ ಮೋಹಿತ್‌ ಬಘೇಲ್‌ ‘ಚೋಟೆ ಮಿಯಾ’ ಕಾಮಿಡಿ ಶೋ ಮೂಲಕ ಫೇಮಸ್‌ ಆಗಿದ್ದರು. ನಂತರ ಅವರಿಗೆ ಬಾಲಿವುಡ್‌ ಸಿನಿಮಾಗಳಲ್ಲಿ ನಟಿಸುವ ಅವಕಾಶ ಸಿಕ್ಕಿತು. ಸಲ್ಮಾನ್‌ ಖಾನ್‌ ಜೊತೆ ‘ರೆಡಿ’ ಚಿತ್ರದಲ್ಲಿ ತೆರೆ ಹಂಚಿಕೊಳ್ಳುವ ಮೂಲಕ ಅವರು ಮನೆಮಾತಾಗಿದ್ದರು. ಸಿದ್ದಾರ್ಥ್‌ ಮಲ್ಹೋತ್ರಾ ಮತ್ತು ಪರಿಣೀತಿ ಚೋಪ್ರಾ ಜೋಡಿಯಾಗಿ ನಟಿಸಿದ್ದ ‘ಜಬರಿಯಾ ಜೋಡಿ’ ಸಿನಿಮಾದಲ್ಲೂ ಮೋಹಿತ್‌ ಬಣ್ಣ ಹಚ್ಚಿದ್ದರು.

ಮುಂಬರುವ ‘ಬಂಟಿ ಔರ್‌ ಬಬ್ಲಿ 2’ ಚಿತ್ರದಲ್ಲೂ ಮೋಹಿತ್‌ ನಟಿಸಬೇಕಿತ್ತು. ಅಷ್ಟರಲ್ಲಾಗಲೇ ವಿಧಿ ತನ್ನ ಆಟ ಪ್ರದರ್ಶಿಸಿದೆ. ಅವರ ನಿಧನದ ಸುದ್ದಿಯನ್ನು ಖಚಿತ ಪಡಿಸಿರುವ ‘ಡ್ರೀಮ್‌ ಗರ್ಲ್’ ಚಿತ್ರದ ನಿರ್ದೇಶಕ ರಾಜ್‌ ಶಾಂಡಿಲ್ಯ ಟ್ವಿಟರ್‌ ಮೂಲಕ ಸಂತಾಪ ಸೂಚಿಸಿದ್ದಾರೆ.

- Advertisement -

Latest News

error: Content is protected !!