Thursday, June 4, 2026
Homeತಾಜಾ ಸುದ್ದಿಬಳ್ಳಾರಿ ಜೈಲಿನಲ್ಲಿ ನಟ ದರ್ಶನ್ ವಿಚಾರಾಧೀನ ಕೈದಿ ಸಂಖ್ಯೆ 511

ಬಳ್ಳಾರಿ ಜೈಲಿನಲ್ಲಿ ನಟ ದರ್ಶನ್ ವಿಚಾರಾಧೀನ ಕೈದಿ ಸಂಖ್ಯೆ 511

- Advertisement -
- Advertisement -

ಬಳ್ಳಾರಿ; ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಬೆಂಗಳಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿದ್ದ ನಟ ದರ್ಶನ್ ಅವರನ್ನು ಇಂದು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಯಿತು. ಬಳ್ಳಾರಿ ಜೈಲಿಗೆ ಶಿಫ್ಟ್ ಆಗುತ್ತಿದ್ದಂತೆ ನಟ ದರ್ಶನ್ ಅವರಿಗೆ ವಿಚಾರಣಾಧೀನ ಕೈದಿ ಸಂಖ್ಯೆ 511 ನ್ನು ನೀಡಲಾಗಿದೆ.

  ಹಿಂದೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟ ದರ್ಶನ್ ಕೈದಿ ಸಂಖ್ಯೆ 6,106 ನ್ನು ನೀಡಲಾಗಿತ್ತು. ಆಗ ಅವರ ಅಭಿಮಾನಿಗಳು ಅದನ್ನು ಟ್ಯಾಟೋ, ವಾಹನಗಳ ಮೇಲೆ ಹಾಕಿಸಿಕೊಂಡಿದ್ದರು. ಇದೀಗ ಕೈದಿ ಸಂಖ್ಯೆ ಬದಲಾಗಿದ್ದು ಟ್ಯಾಟೋ ಹಾಕ್ಕೊಂಡವರೆಲ್ಲಾ ಕಂಗಲಾಗಿದ್ದಾರೆ.

ಅತ್ಯಂತ ಹಳೆಯ ಜೈಲಾಗಿರುವ ಬಳ್ಳಾರಿಯ ಜೈಲಿನಲ್ಲಿ  15 ವಿಶೇಷ ಭದ್ರತಾ ಸೆಲ್ ಗಳಿದ್ದು, ಅದರಲ್ಲಿ ಕೊನೆಯ ಅಂದರೆ 15ನೇ ಭದ್ರತಾ ಸೆಲ್ ನಲ್ಲಿ ನಟ ದರ್ಶನ್ ಅವರನ್ನು ಇರಿಸಲಾಗಿದೆ.

- Advertisement -

Latest News

error: Content is protected !!