Thursday, June 4, 2026
Homeಅಪರಾಧನಟ ಅಲ್ಲು ಅರ್ಜುನ್ ಜಾಮೀನು ತೀರ್ಪು ಜ.3 ಕ್ಕೆ

ನಟ ಅಲ್ಲು ಅರ್ಜುನ್ ಜಾಮೀನು ತೀರ್ಪು ಜ.3 ಕ್ಕೆ

- Advertisement -
- Advertisement -

ಹೈದರಾಬಾದ್‌:  ಪುಷ್ಪ 2 ಚಿತ್ರ ಪ್ರೀಮಿಯರ್ ಶೋ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ 35 ವರ್ಷದ ಮಹಿಳೆ ಸಾವನ್ನಪ್ಪಿದ್ದು,  ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಅಲ್ಲು ಅರ್ಜುನ್ ಮೇಲೆ ದೂರು ದಾಖಲಿಸಲಾಗಿತ್ತು. ಇದೀಗ ಜಾಮೀನು ಅರ್ಜಿಯ ತೀರ್ಪನ್ನು ಜ.3ರಂದು ನೀಡುವುದಾಗಿ ಹೇಳಲಾಗಿದೆ.

 ನಟ ಅಲ್ಲು ಅರ್ಜುನ್ ಗೆ ಸಾಮಾನ್ಯ ಜಾಮೀನು ನೀಡುವಂತೆ ಅವರ ಹಿರಿಯ ವಕೀಲ ನಿರಂಜನ್ ರೆಡ್ಡಿ ವಾದ ಮಂಡಿಸಿದರು. ಇದೇ ವೇಳೆ ಪಬ್ಲಿಕ್ ಪ್ರಾಸಿಕ್ಯೂಟರ್‌ ಜಾಮೀನು ಅರ್ಜಿಯನ್ನು ವಜಾಗೊಳಿಸುವಂತೆ ಮನವಿ ಮಾಡಿದರು.

ಇದೀಗ ಸಾಮಾನ್ಯ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ನಾಂಪಲ್ಲಿ ಜಿಲ್ಲಾ ನ್ಯಾಯಾಲಯವು ಜನವರಿ 3 ರಂದು ತೀರ್ಪು ನೀಡುವುದಾಗಿ ತಿಳಿಸಲಾಗಿದೆ.

ಅಲ್ಲು ಅರ್ಜುನ್‌ಗೆ ಈಗಾಗಲೇ ಹೈಕೋರ್ಟ್ ನಾಲ್ಕು ವಾರಗಳ ಮಧ್ಯಂತರ ಜಾಮೀನು ನೀಡಿದ್ದು, ಇದೀಗ ಸಾಮಾನ್ಯ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ ಎನ್ನಲಾಗಿದೆ.

- Advertisement -

Latest News

error: Content is protected !!