- Advertisement -
- Advertisement -
ಬೆಳ್ತಂಗಡಿ : JMFC ನ್ಯಾಯಾಲಯದ CC 90/2022 ಪ್ರಕರಣದಲ್ಲಿ ಮಾನ್ಯ ಬೆಳ್ತಂಗಡಿ ನ್ಯಾಯಾಲಯಕ್ಕೆ ಸುಮಾರು ಎರಡು ವರ್ಷದಿಂದ ಹಾಜರಾಗದೇ ಇದ್ದ ಚೆಕ್ ಬೌನ್ಸ್ ಪ್ರಕರಣದ ವಾರಂಟು ಆರೋಪಿ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ತಿಲಕ್ ನಗರ ನಿವಾಸಿ ಅಬ್ದುಲ್ ಅವರ ಮಗನಾದ ಮಹಮ್ಮದ್ ಹಾರೀಸ್ (37) ಎಂಬತನನ್ನು ಮಾಹಿತಿ ಕಲೆ ಹಾಕಿ ಜು.13ರಂದು ಮಧ್ಯಾಹ್ನ 2:30 ಗಂಟೆಗೆ ಮಂಗಳೂರು ತಾಲೂಕು ಮೂಡಬಿದ್ರೆ ಬಸ್ಸು ತಂಗುದಾಣದ ಬಳಿ ಬೆಳ್ತಂಗಡಿ ವೃತ್ತದ ಇನ್ಸ್ಪೆಕ್ಟರ್ ನಾಗೇಶ್ ಕದ್ರಿ ಹಾಗೂ ಧರ್ಮಸ್ಥಳ ಠಾಣಾ ಪಿಎಸ್ಐ ಕಿಶೋರ್ ಗೌಡ ಮತ್ತು ಪಿಎಸ್ಐ ಸಮರ್ಥ ಆರ್ ಗಾಣಿಗೇರ ಮಾರ್ಗದರ್ಶನದಂತೆ ಸಿಬ್ಬಂದಿ ರಾಜೇಶ್ ಎನ್,ವಿನಯ ಪ್ರಸನ್ನ ರವರು ಆರೋಪಿಯನ್ನು ಬಂಧಿಸಿ ಮಾಡಿ ಮಾನ್ಯ JMFC ಬೆಳ್ತಂಗಡಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದು ಆರೋಪಿಗೆ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದ್ದಾರೆ.
- Advertisement -