Thursday, May 2, 2024
Homeತಾಜಾ ಸುದ್ದಿಪೊಲೀಸರಿಗೆ ಆಟಿಕೆ ಪಿಸ್ತೂಲ್ ತೋರಿಸಿ ಬೆದರಿಸಿದ ಕಿಲಾಡಿ; ಖತರ್ನಾಕ್ ಖದೀಮನ ಹೆಡೆಮುರಿ ಕಟ್ಟಿದ ಪೊಲೀಸರು

ಪೊಲೀಸರಿಗೆ ಆಟಿಕೆ ಪಿಸ್ತೂಲ್ ತೋರಿಸಿ ಬೆದರಿಸಿದ ಕಿಲಾಡಿ; ಖತರ್ನಾಕ್ ಖದೀಮನ ಹೆಡೆಮುರಿ ಕಟ್ಟಿದ ಪೊಲೀಸರು

spot_img
- Advertisement -
- Advertisement -

ಬೆಂಗಳೂರು;ಪೊಲೀಸರಿಗೆ ಆಟಿಕೆ ಪಿಸ್ತೂಲ್‌ ತೋರಿಸಿ ಬೆದರಿಸಿ ಎಸ್ಕೇಪ್ ಆಗಿದ್ದ ಮೀನು ವ್ಯಾಪಾರಿಯೊಬ್ಬನನ್ನು  ಕೊನೆಗೂ ಕೇರಳ ಪೊಲೀಸರು ಬಂಧಿಸಿದ್ದಾರೆ.ಕೇರಳ ಮೂಲದ ಜಾಫರ್‌ ಬಂಧಿತ ಆರೋಪಿ. ಆರೋಪಿಯಿಂದ ಆಟಿಕೆ ಪಿಸ್ತೂಲ್‌ ಜಪ್ತಿ ಮಾಡಲಾಗಿದೆ.

ಡ್ರಗ್ಸ್‌ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನು ಬಂಧಿಸಲು ಹೆಚ್‌ಎಸ್‌ಆರ್‌ ಲೇಔಟ್‌ಗೆ ಕೇರಳ ಪೊಲೀಸರ ತಂಡ ತೆರಳಿತ್ತು.ಆ ವೇಳೆ ತನಿಖಾ ತಂಡಕ್ಕೆ ಪಿಸ್ತೂಲ್‌ ತೋರಿಸಿ ಕೇರಳಕ್ಕೆ ಜಾಫರ್‌ ಪರಾರಿಯಾಗಿದ್ದ. ಕೊನೆಗೆ ಆತನನ್ನು ಪತ್ತೆ ಹಚ್ಚಿ ಕೇರಳ ಪೊಲೀಸರು ಬಂಧಿಸಿದ್ದಾರೆ

ಪಿಸ್ತೂಲ್‌ ತೋರಿಸಿ ಜೀವ ಬೆದರಿಕೆ ಪ್ರಕರಣ ಸಂಬಂಧ ಆರೋಪಿಯನ್ನು ಬಾಡಿ ವಾರೆಂಟ್‌ ಮೇರೆಗೆ ವಶಕ್ಕೆ ಪಡೆದು ಹೆಚ್ಎಸ್‌ಆರ್‌ ಲೇ ಔಟ್ ಠಾಣೆ ಪೊಲೀಸರು ನಗರಕ್ಕೆ ಕರೆತಂದಿದ್ದಾರೆ ಎಂದು ಆಗ್ನೇಯ ವಿಭಾಗದ ಡಿಸಿಪಿ ಡಾ. ಸಿ.ಕೆ.ಬಾಬಾ ತಿಳಿಸಿದ್ದಾರೆ.

ಕೇರಳದಲ್ಲಿ ತನ್ನ ಪತ್ನಿ ಹಾಗೂ ಇಬ್ಬರು ಮಕ್ಕಳ ಜತೆ ಜಾಫರ್‌ ನೆಲೆಸಿದ್ದು,ಮೀನು ವ್ಯಾಪಾರ ಮಾಡಿಕೊಂಡಿದ್ದಾನೆ. ಹಣದಾಸೆಗೆ ಡ್ರಗ್ಸ್‌ ಮಾರಾಟ ದಂಧೆಯಲ್ಲೂ ಆತ ತೊಡಗಿಸಿಕೊಂಡಿದ್ದ. ಈ ಬಗ್ಗೆ ಮಾಹಿತಿ ಪಡೆದ ಕೇರಳ ಪೊಲೀಸರು,ಜಾಫರ್‌ ಬಂಧನಕ್ಕೆ ಮುಂದಾಗಿದ್ದರು.

ಆಗ ತಪ್ಪಿಸಿಕೊಂಡು ಬೆಂಗಳೂರಿಗೆ ಬಂದಿದ್ದ ಆತ, ಹೆಚ್‌ಎಸ್‌ಆರ್‌ ಲೇ ಔಟ್‌ನಲ್ಲಿ ಆಶ್ರಯ ಪಡೆದಿದ್ದ.ಈ ಸುಳಿವು ಪಡೆದ ಕೇರಳ ಪೊಲೀಸರು, ಆರೋಪಿ ಬಂಧನಕ್ಕೆ ಕಾರ್ಯಾಚರಣೆಗಿಳಿದಿದ್ದರು.ಈ ವೇಳೆ ತನಿಖಾ ತಂಡಕ್ಕೆ ಜೀವ ಬೆದರಿಕೆ ಹಾಕಿ ಆರೋಪಿ ಪರಾರಿಯಾಗಿದ್ದ.ಈ ಸಂಬಂಧ ಹೆಚ್‌ಎಸ್‌ಆರ್‌ ಲೇಔಟ್‌ ಠಾಣೆಗೆ ಕೇರಳ ಪೊಲೀಸರು ದೂರು‌ ನೀಡಿದ್ದರು.

- Advertisement -
spot_img

Latest News

error: Content is protected !!