Friday, June 27, 2025
Homeಕರಾವಳಿಕುಂದಾಪುರ : ಅಂಬರ್ ಗ್ರೀಸ್ ಕಾರ್ಯಾಚರಣೆ ವೇಳೆ FMS ಅಧಿಕಾರಿಗಳಿಗೆ ಹಲ್ಲೆ ಪ್ರಕರಣ: ನಾಲ್ಕು ಜನರನ್ನು...

ಕುಂದಾಪುರ : ಅಂಬರ್ ಗ್ರೀಸ್ ಕಾರ್ಯಾಚರಣೆ ವೇಳೆ FMS ಅಧಿಕಾರಿಗಳಿಗೆ ಹಲ್ಲೆ ಪ್ರಕರಣ: ನಾಲ್ಕು ಜನರನ್ನು ಬಂಧಿಸಿದ ಕುಂದಾಪುರ ಪೊಲೀಸರು

spot_img
- Advertisement -
- Advertisement -

ಕುಂದಾಪುರ : ತಿಮಿಂಗಿಲದ ವಾಂತಿ (ಅಂಬರ್ ಗ್ರೀಸ್) ಮಾರಾಟ ಜಾಲದ ಶಂಕೆಯ ಹಿನ್ನೆಲೆಯಲ್ಲಿ ಕೋಡಿ ಸಮೀಪದ ಎಂಕೋಡಿಯ ಸೌಹಾರ್ದ ಭವನದಲ್ಲಿ ಡಿ.18 ರಂದು ಕಾರ್ಯಾಚರಣೆ ನಡೆಸಿದ್ದ ಮಂಗಳೂರು ಅರಣ್ಯ ಸಂಚಾರಿ ದಳದ (FMS) ಸಬ್ ಇನ್ಸ್ಪೆಕ್ಟರ್ ಜಾನಕಿ ಮತ್ತು ತಂಡದ ಮೇಲೆ ಹಲ್ಲೆ ನಡೆಸಿದ ಆರೋಪಿಗಳ ಪೈಕಿ ನಾಲ್ವರನ್ನು ಕುಂದಾಪುರ ಪೊಲೀಸರನ್ನು ಡಿ.20 ರಂದು ಬಂಧಿಸಿದ್ದಾರೆ.

ಆರೋಪಿಗಳಾದ ಕೋಡಿಯ ನಿವಾಸಿಗಳಾದ ಅಬೂಬಕ್ಕರ್ (50), ಹಸೈನಾರ್ (57), ಉಬದುಲ್ಲಾ (40) ಹಾಗೂ ಬೈಂದೂರಿನ ಮಹಮ್ಮದ್ ಅಲಿ (50) ಬಂಧಿತರು. ಇವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಉಳಿದ ಆರೋಪಿಗಳಿಗಾಗಿ ಪೊಲೀಸರು ಬಲೆ ಬೀ ಸಿದ್ದಾರೆ.

- Advertisement -
spot_img

Latest News

error: Content is protected !!