ಉಳ್ಳಾಲ: ಮಹಿಳೆಗೆ ಕಿರುಕುಳ ನೀಡಿದ ಆರೋಪದಲ್ಲಿ ಮುನ್ನೂರು ಗ್ರಾಪಂ ಸದಸ್ಯನ ವಿರುದ್ಧ ಬುಧವಾರ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಿದ್ದಾರೆ.
ಮುನ್ನೂರು ಗ್ರಾಪಂ ಸದಸ್ಯ ಬಾಬು ಶೆಟ್ಟಿ ಬಂಧಿತ ಆರೋಪಿ.ಅಧ್ಯಕ್ಷರ ಕೊಠಡಿಯಲ್ಲಿ ಸಿಸಿ ಟಿವಿ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿ ಸದಸ್ಯನನ್ನು ಬಂಧಿಸಿದ್ದಾರೆ.
ನಿವೇಶನ ರಹಿತ ಮಹಿಳೆಯೊಬ್ಬರು ಸೆ.18ರಂದು ಸೈಟ್‌ಗೆ ಅರ್ಜಿ ನೀಡಲೆಂದು ಮುನ್ನೂರು ಗ್ರಾಪಂಗೆ ತೆರಳಿದ್ದರು. ಈ ವೇಳೆ ಪ್ರಕರಣದ ಆರೋಪಿ ಮುನ್ನೂರು ಗ್ರಾಪಂ ಸದಸ್ಯ ಬಾಬು ಶೆಟ್ಟಿಅನುಚಿತವಾಗಿ ವರ್ತಿಸಿದ್ದು ಘಟನೆ ನಡೆದು 20 ದಿನಗಳ ಬಳಿಕ ದೂರು ದಾಖಲಿಸಿದ್ದು, ಮಹಿಳೆ ನೀಡಿದ ನೀಡಿದ ದೂರಿನಂತೆ ಪ್ರಕರಣ ದಾಖಲಿಸಲಾಗಿದೆ.
ಈ ವೇಳೆ ಆರೋಪಿ ಬಾಬು ಅವರನ್ನು ಅಧ್ಯಕ್ಷರ ಕೊಠಡಿಗೆ ಕರೆಸಿ ಕಿರುಕುಳ ನೀಡಿದ ಆರೋಪ ವ್ಯಕ್ತವಾಗಿತ್ತು. ಈ ಬಗ್ಗೆ ತನಿಖೆ ನಡೆಸುವಂತೆ ಡಿವೈಎಫ್‌ಐ ಮುನ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷರಿಗೆ ಮನವಿ ಸಲ್ಲಿಸಿ ಒತ್ತಾಯಿಸಿತ್ತು. ಪಂಚಾಯತ್ ನ ಬೇರೆ ಯಾವುದೋ ಘಟನೆಗೆ ಸಂಬಂಧಿಸಿದಂತೆ ಸಿ.ಸಿ ಟಿವಿ ಪರಿಶೀಲಿಸುತ್ತಿರುವಾಗ ಈ ಘಟನೆ ಬೆಳಕಿಗೆ ಬಂದಿದೆ.


