Wednesday, June 24, 2026
Homeಕರಾವಳಿರಬ್ಬರ್ ಸ್ಮೋಕ್ ಹೌಸಿಗೆ ಆಕಸ್ಮಿಕ ಬೆಂಕಿ..!; ಹಲವು ವಸ್ತುಗಳಿಗೆ ಹಾನಿಯಾಗಿ ಅಪಾರ ನಷ್ಟ

ರಬ್ಬರ್ ಸ್ಮೋಕ್ ಹೌಸಿಗೆ ಆಕಸ್ಮಿಕ ಬೆಂಕಿ..!; ಹಲವು ವಸ್ತುಗಳಿಗೆ ಹಾನಿಯಾಗಿ ಅಪಾರ ನಷ್ಟ

- Advertisement -
- Advertisement -

ಸುಳ್ಯ,: ಇಲ್ಲಿನ ಸಂಪಾಜೆಯಲ್ಲಿ ರಬ್ಬರ್ ಸ್ಮೋಕ್ ಹೌಸಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ, ರಬ್ಬರ್ ಸ್ಕ್ರಾಪ್, ಶೀಟು ಸೇರಿದಂತೆ ಸ್ಮೋಕ್ ಹೌಸ್ ಪೆಟ್ಟಿಗೆಗೆ ಹಾನಿಯಾಗಿ ಅಪಾರ ನಷ್ಟ ಸಂಭವಿಸಿದ ಘಟನೆ ನಡೆದಿದೆ.

ರಬ್ಬರ್ ಸ್ಮೋಕ್ ಹೌಸ್ ಕೊಡಗು ಸಂಪಾಜೆ ಗ್ರಾಮ ಪಂಚಾಯತಿ ಅಧ್ಯಕ್ಷೆ ರಮಾದೇವಿ ಬಾಲಚಂದ್ರ ಕಳಗಿ ಅವರ ಮನೆಯ ಸಮೀಪದಲ್ಲಿದ್ದು, ಆಕಸ್ಮಿಕವಾಗಿ ಬೆಂಕಿ ರಬ್ಬರ್ ಸ್ಕ್ರಾಪ್ ಹಾಗೂ ಶೀಟುಗಳಿಗೆ ತಗುಲಿದ್ದು, ಸ್ಮೋಕ್ ಹೌಸ್ ಪೆಟ್ಟಿಗೆಗೆ ಹಾನಿಯಾಗಿದೆ.

ಘಟನೆ ಸಂಭವಿಸುತ್ತಿದ್ದಂತೆ ಕೂಡಲೇ ರಮಾದೇವಿ ಕಳಗಿ ಅವರು ಸ್ಥಳೀಯರಿಗೆ ವಿಷಯ ತಿಳಿಸಿದ್ದು, ಗ್ರಾ.ಪಂ. ಸದಸ್ಯ ನವೀನ, ರಬ್ಬರ್ ಟ್ಯಾಪರ್ ಗಳು ಸೇರಿ ಬೆಂಕಿ ನಂದಿಸಿದರೆಂದು ತಿಳಿದುಬಂದಿದೆ.

- Advertisement -

Latest News

error: Content is protected !!