Saturday, June 6, 2026
Homeಕರಾವಳಿಉಪ್ಪಿನಂಗಡಿ; ಗೂಡ್ಸ್ ರಿಕ್ಷಾ ಹಾಗೂ ದ್ವಿಚಕ್ರ ವಾಹನ ನಡುವೆ ಅಪಘಾತ; ದ್ವಿಚಕ್ರ ಸವಾರರಿಬ್ಬರಿಗೆ ಗಂಭೀರ ಗಾಯ

ಉಪ್ಪಿನಂಗಡಿ; ಗೂಡ್ಸ್ ರಿಕ್ಷಾ ಹಾಗೂ ದ್ವಿಚಕ್ರ ವಾಹನ ನಡುವೆ ಅಪಘಾತ; ದ್ವಿಚಕ್ರ ಸವಾರರಿಬ್ಬರಿಗೆ ಗಂಭೀರ ಗಾಯ

- Advertisement -
- Advertisement -

ಉಪ್ಪಿನಂಗಡಿ: ಗೂಡ್ಸ್ ರಿಕ್ಷಾ ಹಾಗೂ ದ್ವಿಚಕ್ರ ವಾಹನ ನಡುವೆ ಅಪಘಾತ ಸಂಭವಿಸಿ ಸವಾರರಿಬ್ಬರು ಗಂಭೀರ ಗಾಯಗೊಂಡ ಘಟನೆ ಫೆ.1ರ ಸಂಜೆ ಬೆಳ್ತಂಗಡಿ ತಾಲೂಕಿನ ತಣ್ಣೀರುಪಂಥ ಗ್ರಾ.ಪಂ. ವ್ಯಾಪ್ತಿಯ ಶಿವಗಿರಿ ಜಂಕ್ಷನ್ ಬಳಿ ನಡೆದಿದೆ.

ಅಬೂಬಕ್ಕರ್ ಸಿದ್ದೀಕ್ ಹಾಗೂ ಮುಹಮ್ಮದ್ ಕಲೀಲ್ ಗಾಯಗೊಂಡವರು. ಇವರಿಬ್ಬರು ಮೂಲತಃ ಕುಪ್ಪೆಟ್ಟಿಯವರಾಗಿದ್ದು ಇವರು ಸಾಗುತ್ತಿದ್ದ ಬೈಕ್  ಗೂಡ್ಸ್ ರಿಕ್ಷಾಕ್ಕೆ ಹಿಂಬದಿಯಿಂದ ಢಿಕ್ಕಿ ಹೊಡೆದ ಕಾರಣ ರಸ್ತೆಗೆಸೆಯಲ್ಪಟ್ಟು, ಗಂಭೀರ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಪುತ್ತೂರಿನ ಆಸ್ಪತ್ರೆಗೆ ಸಾಗಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರು ದಿಚಕ್ರ ವಾಹನದಲ್ಲಿ ಕರಾಯ ಕಡೆಯಿಂದ ಕುಪ್ಪೆಟ್ಟಿ ಕಡೆಗೆ ಹೋಗುತ್ತಿದ್ದರು ಎನ್ನಲಾಗಿದೆ.

- Advertisement -

Latest News

error: Content is protected !!