Friday, June 5, 2026
Homeಕರಾವಳಿಸಂಪಾಜೆಯ ದೇವರಕೊಲ್ಲಿ ಬಳಿ ಕಾರು ಹಾಗೂ ಕಂಟೈನರ್ ಮಧ್ಯೆ ಅಪಘಾತ;  ನಾಲ್ವರಿಗೆ ಗಂಭೀರ ಗಾಯ

ಸಂಪಾಜೆಯ ದೇವರಕೊಲ್ಲಿ ಬಳಿ ಕಾರು ಹಾಗೂ ಕಂಟೈನರ್ ಮಧ್ಯೆ ಅಪಘಾತ;  ನಾಲ್ವರಿಗೆ ಗಂಭೀರ ಗಾಯ

- Advertisement -
- Advertisement -

ಸುಳ್ಯ; ಕಾರು ಹಾಗೂ ಕಂಟೈನರ್ ಮಧ್ಯೆ ಅಪಘಾತವಾಗಿ  ನಾಲ್ವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಮಡಿಕೇರಿ ತಾಲೂಕಿನ ದೇವರಕೊಲ್ಲಿ ಬಳಿ ನಡೆದಿದೆ. ಅಪಘಾತದಲ್ಲಿ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎನ್ನಲಾಗಿದೆ.

ಗಾಯಾಳುಗಳನ್ನು ಸುಳ್ಯದ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯಲ್ಲಿ ಕಂಟೈನರ್ ಚಾಲಕ ಕೂಡ ಗಂಭೀರ ಗಾಯಗೊಂಡಿದ್ದಾನೆ ಎನ್ನಲಾಗಿದೆ. ಕಂಟೈನರ್ ಮಡಿಕೇರಿ ಕಡೆಯಿಂದ ಮಂಗಳೂರು ಕಡೆಗೆ ಬರುತ್ತಿತ್ತು. ಕಾರು ಸಂಪಾಜೆ ಮೂಲಕ ಮಡಿಕೇರಿಗೆ ಸಾಗುತ್ತಿತ್ತು ಎಂದು ತಿಳಿದು  ಬಂದಿದೆ. ಗಾಯಾಳುಗಳು ಮೈಸೂರು ಮೂಲದವರು ಎಂಬ ಮಾಹಿತಿ ಲಭ್ಯವಾಗಿದೆ.

- Advertisement -

Latest News

error: Content is protected !!