Wednesday, June 24, 2026
Homeಕರಾವಳಿಮಂಗಳೂರುಸೌದಿ ಅರೇಬಿಯಾದಲ್ಲಿ ಬಸ್ ಗಳ ಮಧ್ಯೆ ಅಪಘಾತ: ಉಳ್ಳಾಲದ ಯುವಕ ಸಾವು

ಸೌದಿ ಅರೇಬಿಯಾದಲ್ಲಿ ಬಸ್ ಗಳ ಮಧ್ಯೆ ಅಪಘಾತ: ಉಳ್ಳಾಲದ ಯುವಕ ಸಾವು

- Advertisement -
- Advertisement -

ಮಂಗಳೂರು; ಸೌದಿ ಅರೇಬಿಯಾದಲ್ಲಿ ಬಸ್ ಗಳ ಮಧ್ಯೆ ಅಪಘಾತ ಸಂಭವಿಸಿ ಉಳ್ಳಾಲದ ಯುವಕ ಸಾವನ್ನಪ್ಪಿರುವ ಘಟನೆ ನಡೆದಿದೆ. ಉಳ್ಳಾಲದ ಮಿಲ್ಲತ್ ನಗರ ನಿವಾಸಿ ಅಬ್ದುಲ್ ರಾಝಿಕ್ (27) ಮೃತ ದುರ್ದೈವಿ. ಅಬ್ದುಲ್ ರಾಝಿಕ್ ಸೌದಿ ಅರೇಬಿಯಾದಲ್ಲಿ ಕೆಲಸದ ನಿಮಿತ್ತ ಬಸ್ ನಲ್ಲಿ ತೆರಳುತ್ತಿದ್ದಾಗ ಅಪಘಾತ ಸಂಭವಿಸಿದೆ ಎನ್ನಲಾಗಿದೆ.


ಸೌದಿ ಅರೇಬಿಯಾದ ಜುಬೈಲ್ ನ ಪಾಲಿಟೆಕ್ ಕಂಪೆನಿಯೊಂದರಲ್ಲಿ ಉದ್ಯೋಗದಲ್ಲಿದ್ದ ಅಬ್ದುಲ್ ರಾಝಿಕ್ ಸೆಪ್ಟೆಂಬರ್ 14ರಂದು ಸಂಜೆ ರಾತ್ರಿ ಪಾಳಿ ಕೆಲಸಕ್ಕೆಂದು ಬಸ್ ನಲ್ಲಿ ತೆರಳುತ್ತಿದ್ದಾಗ ರಸ್ತೆ ಅಪಘಾತ ಸಂಭವಿಸಿದೆ. ಇವರು ಸಂಚರಿಸುತ್ತಿದ್ದ ಬಸ್ಸಿಗೆ ಇನ್ನೊಂದು ಬಸ್ ಢಿಕ್ಕಿ ಹೊಡೆದಿದೆ. ಇದರ ಪರಿಣಾಮವಾಗಿ ಗಂಭೀರವಾಗಿ ಗಾಯಗೊಂಡಿದ್ದ ರಾಝಿಕ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಸೌದಿ ಅರಬಿಯಾದ ಜುಬೈಲ್ ನಲ್ಲಿ ಪಾಲಿಟೆಕ್ ಎಂಬ ಕಂಪೆನಿಯಲ್ಲಿ ಉದ್ಯೋಗದಲ್ಲಿದ್ದ ಅವರು, ಕಳೆದ ಜುಲೈ 11ರಂದು ಊರಿಗೆ ಬಂದಿದ್ದರು. ಒಂದು ತಿಂಗಳ ರಜೆ ಮುಗಿಸಿ ಆಗಸ್ಟ್ 15ರಂದು ಎರಡನೇ ಬಾರಿ ವಿದೇಶಕ್ಕೆ ತೆರಳಿದ್ದರು.

- Advertisement -

Latest News

error: Content is protected !!