Saturday, May 18, 2024
Homeಅಪರಾಧಕಾರ್ಕಳ : ಬಜರಂಗದಳದ ಕಾರ್ಯಕರ್ತನ ಪತ್ನಿಯ ಅಪಹರಣ ; ದೂರು ದಾಖಲು!

ಕಾರ್ಕಳ : ಬಜರಂಗದಳದ ಕಾರ್ಯಕರ್ತನ ಪತ್ನಿಯ ಅಪಹರಣ ; ದೂರು ದಾಖಲು!

spot_img
- Advertisement -
- Advertisement -

ಮೂಡುಬಿದಿರೆ : ಮೂಡುಬಿದಿರೆ ತಾಲೂಕಿನ ಬಜರಂಗದಳದ ಕಾರ್ಯಕರ್ತನೋರ್ವನ ಪತ್ನಿಯನ್ನು ಕಾರ್ಕಳದ ಬಜರಂಗದಳದ ಮುಖಂಡನೋರ್ವ ಅಪಹರಿಸಿರುವ ಬಗ್ಗೆ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಂದೀಪ್ ಆಚಾರ್ಯ ಎಂಬಾತ ಬಜರಂಗದಳದ ಬಜಗೋಳಿ ವಲಯ ಸಂಚಾಲಕ ಈ ಪ್ರಕರಣದ ಆರೋಪಿಯಾಗಿದ್ದಾನೆ.

ಈತ ಶಿರ್ಲಾಲು ಹೈಸ್ಕೂಲ್ ಬಳಿ ಹಾಡಿಯಂಗಡಿ ಎಂಬಲ್ಲಿನ ನಿವಾಸಿ, ಬಜರಂಗದಳದ ಕಾರ್ಯಕರ್ತರೆನ್ನಲಾದ ಹರೀಶ್ ಎಂಬವರ ಪತ್ನಿಯನ್ನು ಅಪಹರಿಸಿರುವುದಾಗಿ ಮಹಿಳೆಯ ಸಹೋದರ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಮಹಿಳೆ ವಾರದ ಹಿಂದೆ ಎರಡು ವರ್ಷದ ಮಗುವಿನೊಂದಿಗೆ ತವರು ಮನೆಗೆ ತೆರಳಿದ್ದಳು. ಈ ವೇಳೆ ಸಂದೀಪ್ ಆಚಾರ್ಯ ಆಕೆಯನ್ನು ಅಪಹರಿಸಿದ್ದಾಗಿ ದೂರಿನಲ್ಲಿ ತಿಳಿಸಲಾಗಿದೆ. ದೂರಿನ ಪ್ರಕಾರ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಅಪಹರಣಕ್ಕೊಳಗಾದ ಮಹಿಳೆ ಹಾಗೂ ಆರೋಪಿಯನ್ನು ಪತ್ತೆಹಚ್ಚಿದ್ದಾರೆ. ಮಹಿಳೆಯನ್ನು ಮಂಗಳೂರಿನ ಪ್ರಜ್ಞಾ ಕೌನ್ಸಿಲಿಂಗ್ ಕೇಂದ್ರಕ್ಕೆ ಸೇರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

- Advertisement -
spot_img

Latest News

error: Content is protected !!